ರೌಡಿಶೀಟರ್ ನಿಂದ ಪೊಲೀಸರಿಗೆ ಧಮ್ಕಿ..!

Threatining call to police inspector

23-01-2018

ಬೆಂಗಳೂರು: ರೌಡಿಶೀಟರ್ ನಿಂದ ಪೊಲೀಸರಿಗೆ ಧಮ್ಕಿ ಹಾಕಿರುವ ಘಟನೆಯು ನಗರದಲ್ಲಿ ಬೆಳಕಿಗೆ ಬಂದಿದೆ. ರೌಡಿಶೀಟರ್ ಅಲೀಂ ಎಂಬಾತ ಜೆಜೆ ನಗರ ಇನ್ಸ್ ಪೆಕ್ಟರ್ ಗೆ ಕರೆ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗು ತಿಳಿದು ಬಂದಿದೆ.

ಜೆಜೆ ನಗರದ ಇನ್ಸ್ ಪೆಕ್ಟರ್ ಲಿಂಗರಾಜು ಮತ್ತು ಕ್ರೈಂ ಪೇದೆ ಗಜೇಂದ್ರರನ್ನು ಮರ್ಡರ್ ಮಾಡ್ತೀನಿ ಎಂದು ರೌಡಿಶೀಟರ್ ಅಲೀಂ ಪೊಲೀಸ್ ಸ್ಟೇಷನ್ ಗೆ ಕರೆ ಮಾಡಿ ಧಮ್ಕಿ ಹಾಕಿದ್ದಾನೆ. ಕೆಲವು ದಿನಗಳ ಹಿಂದೆ ರೌಡಿಶೀಟರ್ ಚೋರ್ ಇಮ್ರಾನ್ ಲಾಂಗ್ ಮಚ್ಚು ಹಿಡಿದುಕೊಂಡು ಫೇಸ್ ಬುಕ್ ನಲ್ಲಿ ಫೋಟೋ ಹಾಕಿದ್ದರು. ಅದಕ್ಕೆ ಪೊಲೀಸರು ಆತನನ್ನು ಠಾಣೆಗೆ ಕರೆತಂದು ಲಾಠಿ ರುಚಿ ತೋರಿಸಿ, ಬುದ್ಧಿವಾದ ಹೇಳಿ ಬಿಟ್ಟುಕಳುಹಿಸಿದ್ದರು. ಇದಾದ ನಂತರ ಇಮ್ರಾನ್ ಅಲೀಂ ಹತ್ತಿರ ಪೊಲೀಸರು ನನಗೆ ಹೊಡೆದು ಹಣ ಕಿತ್ತುಕೊಂಡಿದ್ದಾರೆ ಎಂದು ಹೇಳಿದ್ದ.

ಇದಕ್ಕೆ ರೌಡಿಶೀಟರ್ ಅಲೀಂ ಕಳೆದ ವಾರ ಪೇದೆ ಗಜೇಂದ್ರನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದ. ಇನ್ಸ್ ಪೆಕ್ಟರ್ ಮತ್ತು ಗಜೇಂದ್ರನನ್ನು ಸುಮ್ಮನೆ ಬಿಡೋದಿಲ್ಲ ಎಂತಲೂ ಹೇಳಿದ್ದ. ಇದೀಗ ಅಲೀಂ ನಿನ್ನೆ ಮತ್ತೆ ಪೊಲೀಸ್ ಸ್ಟೇಷನ್ ಗೆ ಫೋನ್ ಮಾಡಿ ಇನ್ಸ್ ಪೆಕ್ಟರ್ ಲಿಂಗರಾಜು ಮತ್ತು ಪಿಸಿ ಗಜೇಂದ್ರನನ್ನು ಮರ್ಡರ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ತಲೆಮರೆಸಿಕೊಂಡು ಈ ರೀತಿ ಧಮ್ಕಿ ಹಾಕುತ್ತಿರುವ ಅಲೀಂಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Rowdy inspector ಸ್ಟೇಷನ್ ರೌಡಿಶೀಟರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ