ಕೊಳವೆ ಬಾವಿಯಲ್ಲಿ ಬಾಲಕಿ.. ಮಂದಗತಿಯಲ್ಲಿ ಸಾಗುತ್ತಿರುವ ಕಾರ್ಯಾಚರಣೆ

Kannada News

24-04-2017

ಬೆಳಗಾವಿ :- ಝುಂಜರವಾಡ ಕೊಳವೆ ಬಾವಿ ದುರಂತ ಪ್ರಕರಣ ಹಿನ್ನೆಲೆ ಬಾಲಕಿ ಕಾವೇರಿ ಕೊಳವೆ ಬಾವಿಯಲ್ಲಿ ಸಿಲುಕಿ 38 ಗಂಟೆ ಸಮಯ ಕಳೆದರು ಮಂದಗತಿಯಲ್ಲಿ ಸಾಗುತ್ತಿರುವ ರಕ್ಷಣಾ ಕಾರ್ಯಾಚರಣೆ, ಇನ್ನು ಕನಿಷ್ಟ 4 ಗಂಟೆ ಬೇಕು ಎಂದು ಜಿಲ್ಲಾಧಿಕಾರಿ ಎನ್ ಜಯರಾಂ ಸ್ಪಷ್ಟನೆ ನೀಡಿದ್ದರೂ, ಜಿಲ್ಲಾಡಳಿತದ ಪ್ರಮುಖರೆಲ್ಲರೂ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಬಾವಿ ಪಕ್ಕದಲ್ಲೇ ಸುರಂಗ ಮಾರ್ಗದ ಮೂಲಕ ೨೫ ಅಡಿ ಮಾರ್ಗ ನಿರ್ಮಾಣ ತಲುಪಿದ್ದು, ೨೨ ಅಡಿ ಆಳದಲ್ಲಿ ಬಾಲಕಿ ಕಾವೇರಿ ಸಿಲುಕಿದ್ದಾಳೆ ಎನ್ನಲಾಗಿದೆ. ಕಾರ್ಯಾಚರಣೆಗೆ ೨ ಇಟಾಚಿ, ೨ ಜೆಸಿಬಿ ಬಳಕೆ ಮಾಡಲಾಗಿದ್ದು ಅಗ್ನಿಶಾಮಕ ದಳ, ಎನ್ ಡಿ ಆರ್ ಎಫ್, ಎಂ ಎಲ್ ಐ ಆರ್ ಸಿ ಅಧಿಕಾರಿಗಳು ಮತ್ತು ಕೋಲಾರ ಹಟ್ಟಿ ಚಿನ್ನದ ಗಣಿ ನುರಿತ ತಜ್ಞರ ತಂಡದಿಂದ ಕಾರ್ಯಾಚರಣೆ ಸಾಗುತ್ತಿದೆ.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ