‘ಕುತಂತ್ರ ರಾಜಕಾರಣ ಬಿಡಿ’

K.S.Eshwarappa blames siddaramaiah on mahadayi issue

22-01-2018

ಶಿವಮೊಗ್ಗ: ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ರಾಜಕೀಯ ಮಾಡುತ್ತಿದೆ, ಕುಡಿವ ನೀರಿನ ವಿಷಯದಲ್ಲಿ ಮುಖ್ಯಮಂತ್ರಿ ಜನತೆಗೆ ದ್ರೋಹ ಮಾಡುತ್ತಿದ್ದಾರೆ ಎಂದು ಕೆ.ಎಸ್‌.ಈಶ್ವರಪ್ಪ ಸಿಎಂ ವಿರುದ್ಧ ಕಿಡಿಕಾರಿದ್ದಾರೆ.  ಇನ್ನು 27ರಂದು ಈ ವಿಷಯವಾಗಿ ಸರ್ವಪಕ್ಷ ಸಭೆ ಕರೆದಿದ್ದಾರೆ. ಈ ಸಭೆಗೆ ನಾನೂ ಶೆಟ್ಟರ್ ಪಾಲ್ಗೊಳ್ಳಲಿದ್ದೇವೆ ಎಂದು ತಿಳಿಸಿದರು. ನಾವು ಗೋವಾ ಸಿಎಂ ಪತ್ರ ತಂದಂತೆ ನೀವೂ ಸೋನಿಯಾ, ರಾಹುಲ್, ಗೋವಾ ಪ್ರತಿಪಕ್ಷ ನಾಯಕರ ಪತ್ರ ತಂದು ಸಭೆ ನಡೆಸಿ ಎಂದು ಹೇಳಲಿದ್ದೇವೆ ಎಂದರು. 25ರ ಕರ್ನಾಟಕ ಬಂದ್ ಸರ್ಕಾರಿ ಪ್ರಾಯೋಜಿತ ಎಂಬ ಅನುಮಾನ ಬರುತ್ತಿದೆ. ಅಮಿತ್ ಷಾ, ಮೋದಿ ಬರುವ ಸಂದರ್ಭದಲ್ಲಿ ಬಂದ್ ಮಾಡಿಸುತ್ತಿದ್ದಾರೆ‌. ಇಂಥ ಕುತಂತ್ರದ ರಾಜಕಾರಣ ಬಿಡಿ, ನಿಮಗೆ ಕಳಕಳಿ ಇದ್ದಲ್ಲಿ ದಿಟ್ಟ ಹೆಜ್ಜೆ ಇಡಿ ಎಂದರು.

 


ಸಂಬಂಧಿತ ಟ್ಯಾಗ್ಗಳು

K.S.Eshwarapp Mahadayi ಕುತಂತ್ರ ಕರ್ನಾಟಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ