‘ಕಾಂಗ್ರೆಸ್ ದಿಕ್ಕೆಟ್ಟು ದಿವಾಳಿಯಾಗಿದೆ’

Ex Minister srinivas prasad in prarthana yattre

22-01-2018

ಮೈಸೂರು: ಪರಿವರ್ತನಾ ಯಾತ್ರೆಯು ಕರ್ನಾಟಕದಲ್ಲಿ ಸುಮಾರು 10 ಸಾವಿರ ಕಿ.ಮೀ ಸಂಚರಿಸಿ ಇಂದು ನಂಜನಗೂಡಿಗೆ ಬಂದಿದೆ, ಅಲ್ಲದೇ ರಾಜ್ಯಾದ್ಯಂತ ಅತ್ಯಂತ ಯಶಸ್ವಿಯಾಗಿ ಪರಿವರ್ತನಾ ಯಾತ್ರೆ ನಡೆಸಿ ಮುನ್ನುಗ್ಗುತ್ತಿದೆ. ಹೋದಲ್ಲೆಲ್ಲಾ ರಾಜ್ಯದ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.

ನಂಜನಗೂಡಿನಲ್ಲಿ ನಡೆಯುತ್ತಿರುವ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚುನಾವಣೆಯಲ್ಲಿ ನಂಜನಗೂಡು ಅತ್ಯಂತ ಪ್ರಮುಖ ಕ್ಷೇತ್ರ, ಈ ಕ್ಷೇತ್ರದ ಉಪಚುನಾವಣೆ ನಂತರ ಸಿಎಂ ಸಿದ್ದರಾಮಯ್ಯ ಬ್ರಹ್ಮರಾಕ್ಷಸರಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶಗೊಂಡರು.

ಸಿಎಂ ಸಿದ್ದರಾಮಯ್ಯನವರಿಗೆ ಆತ್ಮವಿಶ್ವಾಸ ವಿಲ್ಲ, ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸೋಲಿನ ಗಿನ್ನಿಸ್ ದಾಖಲೆ ಬರೆದಿದೆ, ಕಾಂಗ್ರೆಸ್ ಗುರಿ ಇಲ್ಲದೆ ದಿಕ್ಕೆಟ್ಟು ದಿವಾಳಿಯಾಗಿದೆ ಎಂದು ಲೇವಡಿ ಮಾಡಿದ ಅವರು, ನಂಜನಗೂಡು ಉಪಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ನನ್ನ ರಾಜಕೀಯ ಹಿನ್ನೆಲೆ ಕುರಿತಂತೆ ಪುಸ್ತಕ ಬರೆದಿದ್ದೇನೆ ಮುಂದಿನ ತಿಂಗಳು ಪುಸ್ತಕ ಹೊರಬರಲಿದೆ, ನಂಜನಗೂಡಿನ ಉಪಚುನಾವಣೆಯನ್ನು ನೀವು ಹೇಗೆ ಗೆದಿದ್ದೀರಿ ಎಂಬುದು ಕೂಡಾ ಉಲ್ಲೇಖವಿದೆ ಎಂದು ವಾಗ್ದಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿಯವರು ನಾಲ್ಕು ವರ್ಷಗಳಿಂದ ಉತ್ತಮ ಆಡಳಿತ ನಡೆಸುತ್ತಿದ್ದಾರೆ, ಅವರನ್ನು ಬೆಂಬಲಿಸಿ ಕರ್ನಾಟಕದಲ್ಲಿ ಬಿಜೆಪಿಗೆ ಅವಕಾಶ ಮಾಡಿಕೊಡಬೇಕು ಎಂದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಕಾಂಗ್ರೇಸ್ ಮುಕ್ತ ಭಾರತ
  • Veeresh
  • Emplayee