ಲಾಡ್ಜ್ ನಲ್ಲಿ ಕಳ್ಳನ ಕೈಚಳಕ

theft in lodge bengaluru

22-01-2018

ಬೆಂಗಳೂರು: ಲಾಡ್ಜ್ ಗೆ ಬಂದು ರೂಮ್ ಬುಕ್ ಮಾಡಿ, ಹೋಗುವಾಗ ಹೋಟೆಲ್‍ನಲ್ಲಿದ್ದ ಬೆಲೆಬಾಳುವ ಟಿವಿ ಕಳ್ಳತನ ಮಾಡುತ್ತಿದ್ದ ಬಾಗಲಕೋಟೆಯ ಕಳ್ಳ ಹೆಚ್‍ಎಸ್‍ಆರ್ ಲೇಔಟ್‍ನ  ಸೆವೆನ್ ಆಲೀವ್ಸ್ ಹೋಟೆಲ್‍ನಲ್ಲಿ ತನ್ನ ಕೈಚಳಕ ತೋರಿ ಪರಾರಿಯಾಗಿದ್ದಾನೆ.

ವ್ಯಾಪಾರಕ್ಕಾಗಿ ನಗರಕ್ಕೆ ಬಂದಿರುವುದಾಗಿ ಹೇಳಿಕೊಂಡು ಸೆವೆನ್ ಆಲೀವ್ಸ್ ಹೋಟೆಲ್‍ನಲ್ಲಿ ನಾಲ್ಕು ದಿನಕ್ಕೆ  ರೂಮ್ ಪಡೆದುಕೊಂಡಿದ್ದಾನೆ. ರೂಮ್ ಪಡೆದುಕೊಳ್ಳುವ ಮುನ್ನ ತಾನು ದೇವರಾಜ್ ಎಂಬ ಐಡಿ ಕಾರ್ಡ್‍ವೊಂದನ್ನ ಹೋಟೆಲ್ ಸಿಬ್ಬಂದಿಗೆ ನೀಡಿದ್ದಾನೆ. ಈತ ನೀಡಿರುವ ಐಡಿ ಕಾರ್ಡ್ ನಕಲಿ ಎಂದು ತಿಳಿದುಬಂದಿದೆ. ಜನವರಿ 4 ರಂದು ಈ ಕಳ್ಳತನ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಳ್ಳ ಟಿವಿ ಜೊತೆ ಪರಾರಿಯಾಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇದೇ ವ್ಯಕ್ತಿ ಜನವರಿ 8ರಂದು ಬಾಗಲಕೋಟೆಯ 4 ಲಾಡ್ಜ್‍ಗಳಲ್ಲಿ 8 ಎಲ್‍ಇಡಿ ಟಿವಿಗಳನ್ನು ಕಳ್ಳತನ ಮಾಡಿದ್ದಾನೆ. ಈ ಸಂಬಂಧ ಹೆಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 


ಸಂಬಂಧಿತ ಟ್ಯಾಗ್ಗಳು

Lodge thief ಎಲ್‍ಇಡಿ ಹೋಟೆಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ