'ಹುಲ್ಲಿಗೆ ಬೆಂಕಿ ಹಚ್ಚಿ ರಾದ್ಧಾಂತ ಮಾಡಿದ್ದಾರೆ'

K.J.George reaction on bellanduru lake issue

22-01-2018

ಬೆಂಗಳೂರು: ಬೆಳ್ಳಂದೂರು ಕೆರೆಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆರೆಯ ನೀರಿನಿಂದ ಬೆಂಕಿ ಹೊತ್ತಿಕೊಂಡಿಲ್ಲ. ಯಾರೋ ಕೆರೆ ವ್ಯಾಪ್ತಿಯ ಒಣ ಹುಲ್ಲಿಗೆ ಬೆಂಕಿ ಹಚ್ಚಿ ಇಷ್ಟೆಲ್ಲಾ ರಾದ್ಧಾಂತ ಮಾಡಿದ್ದಾರೆ ಎಂದು ಸಚಿವ ಜಾರ್ಜ್ ಆರೋಪಿಸಿದ್ದಾರೆ.

ಯಾರೋ ಹಚ್ಚದಿದ್ದರೆ ಬೆಂಕಿ ಬೀಳುತ್ತಿರಲಿಲ್ಲ, ಇದರಲ್ಲಿ ಕಿಡಿಕೇಡಿಗಳ ಕೃತ್ಯವಿದೆ. ಆದರೆ ಅದನ್ನೇ ದೊಡ್ಡ ಸುದ್ದಿಯನ್ನಾಗಿ ಮಾಡಲಾಗುತ್ತಿದೆ. ಬೆಂಗಳೂರು ಹೆಸರನ್ನು ಕೆಡಿಸಲು ಪಟ್ಟಭದ್ರರು ಹವಣಿಸುತ್ತಿದ್ದಾರೆ ಎಂದು ಜಾರ್ಜ್ ಹೇಳಿದ್ದಾರೆ. ಚಿಕ್ಕ ವಿಷಯವನ್ನೂ ದೊಡ್ಡದಾಗಿ ಬಿಂಬಿಸಲಾಗುತ್ತಿದೆ, ತಪ್ಪಿದ್ದರೆ ತಿಳಿಸಿ ಸರಿಮಾಡಿಕೊಳ್ಳುತ್ತೇವೆ. ಸುಳ್ಳು ಪ್ರಚಾರ ಮಾಡುವುದನ್ನು ಬಿಡಿ ಎಂದು ವಾಗ್ದಾಳಿ ನಡೆಸಿದರು. ಬೆಳ್ಳಂದೂರು ಕೆರೆ ಬೆಂಕಿ ವಿಚಾರದಲ್ಲಿ ಎಲ್ಲವನ್ನೂ ಅಪಪ್ರಚಾರ ಮಾಡಲಾಗಿದೆ. ನಾವು ಕೆರೆಗಳ ರಕ್ಷಣೆಗೆ ಬದ್ಧರಾಗಿದ್ದೇವೆ. ಎಲ್ಲ ಕೆರೆಗಳ ರಕ್ಷಣೆಗೆ ಕ್ರಮ ಕೈಗೊಂಡಿದ್ದೇವೆ, ಅಭಿವೃದ್ಧಿಗೆ ನಾವು ಬದ್ಧ. ಯಾರು ಎಷ್ಟೇ ರಾಜಕೀಯ ಬಲಾಢ್ಯರಾಗಿದ್ದರೂ ನಾವು ಕೇರ್ ಮಾಡಲ್ಲ. ನಮಗೆ ಅಭಿವೃದ್ಧಿಯಷ್ಟೇ ಮುಖ್ಯ ಎಂದು ಸಚಿವ ಜಾರ್ಜ್ ಸ್ಪಷ್ಟಪಡಿಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

K.J.George bellandur ಪ್ರಚಾರ ಪಟ್ಟಭದ್ರರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ