ಬಹುನಿರೀಕ್ಷಿತ 2.0 ಚಿತ್ರದ ಬಿಡುಗಡೆಯ ದಿನಾಂಕ ಮುಂದೂಡಿದ ಚಿತ್ರತಂಡ

Kannada News

22-04-2017

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹುನಿರೀಕ್ಷಿತ 2.0 ಚಿತ್ರದ ಬಿಡುಗಡೆಯ ದಿನಾಂಕ ಮುಂದೂಡಲ್ಪಟ್ಟಿದ್ದು 2018 ರ ಜ.25 ಕ್ಕೆ ಬಿಡುಗಡೆಯಾಗಲಿದೆ. 

ಈ ವರ್ಷದ ದೀಪಾವಳಿಯ ದಿನದಂದು 2.0 ಚಿತ್ರವನ್ನು ಬಿಡುಗಡೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ ವಿಶ್ವದರ್ಜೆಯ ವಿಎಫ್ಎಕ್ಸ್ ಗಾಗಿ ಕೆಲಸ ಮಾಡುತ್ತಿರುವುದರಿಂದ ಹೆಚ್ಚಿನ ಸಮಯ ತೆಗೆದುಕೊಳ್ಳಲಿದೆ. ಅಮೆರಿಕಾದಲ್ಲಿ ವಿಶ್ಯುಯಲ್ ಎಫೆಕ್ಟ್ ಹೊಂದಿರುವ ಭಾಗದ ಕೆಲಸ ನಡೆಯುತ್ತಿದ್ದು ಚಿತ್ರತಂಡ ಕಾರ್ಯನಿರತವಾಗಿದೆ ಈ ಹಿನ್ನೆಲೆಯಲ್ಲಿ 2018 ರ ಜ.25 ಕ್ಕೆ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.. 

2.0,  2010 ರಲ್ಲಿ ಬಿಡುಗಡೆಯಾದ ಎಂದಿರನ್ ನ ಸೀಕ್ವೆಲ್ ಆಗಿದ್ದು,  ಅಕ್ಷಯ್ ಕುಮಾರ್ ಖಳನಾಯಕನಾಗಿ ನಟಿಸಿದ್ದಾರೆ. ಚಿತ್ರಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದು, ಶಂಕರ್ ನಿರ್ದೇಶನವಿರುವ ಈ ಚಿತ್ರಕ್ಕೆ 450 ಕೋಟಿ ಬಂಡವಾಳವನ್ನ ಹೂಡಲಾಗಿದೆ.

Links :



ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ