‘ಎಲ್ಲಾ ಆದ ಮೇಲೆ ನನಗೆ ನೀನು ಬೇಡ ಎಂದ’

one more love-sex-dhoke case in bengaluru

22-01-2018

ಬೆಂಗಳೂರು: ಯುವತಿಯೊಬ್ಬಳನ್ನು ಲೈಂಗಿಕವಾಗಿ ಬಳಸಿಕೊಂಡು, ನೀನು ನನಗೆ ಬೇಡ ಎಂದು ಮತ್ತೊಬ್ಬಾಕೆಯನ್ನು ಮದುವೆಯಾಗಿ ಮೋಸ ಮಾಡಿರುವ ಲವ್, ಸೆಕ್ಸ್, ದೋಖಾ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ. ಮೋಸಕ್ಕೊಳಗಾದ ಯುವತಿಯು ನಗರದ ಖಾಸಗಿ ಕಾಲೇಜಿನಲ್ಲಿ ಪದವಿ ಮುಗಿಸಿದ್ದಾರೆ. ಪ್ರೀತಿಸುತ್ತೇನೆ ಎಂದು ಹೇಳಿಕೊಂಡು ಬೊಮ್ಮನಹಳ್ಳಿಯ ಜಾಫರ್ ಷರೀಫ್ ಎಂಬಾತ ಮೋಸ ಮಾಡಿದ್ದಾನೆ ಎಂದು ಯುವತಿ ದೂರು ನೀಡಿದ್ದಾರೆ.

ಸುಭಾಷ್ ನಗರದಲ್ಲಿ ವಾಸವಾಗಿರುವ ನನ್ನ ಮನೆಯ ಬಳಿ ತನ್ನ ಬಾವನ ಮೆಡಿಕಲ್ ಶಾಪ್‍ನಲ್ಲಿ ಜಾಫರ್ ಕೆಲಸ ಮಾಡಿಕೊಂಡಿದ್ದನು. ಅಂಗಡಿಯ ಪಕ್ಕದಲ್ಲಿಯೇ ವಾಸವಾಗಿದ್ದು ನನ್ನನ್ನು  ಪರಿಚಯ ಮಾಡಿಕೊಂಡಿದ್ದಾನೆ. ಬಡತನದಲ್ಲೇ ಬೆಳೆದ ನಾನು ಕಾಲೇಜಿಗೆ ಹೋಗುತ್ತಲೇ ಪಾರ್ಟ್ ಟೈಮ್ ಕೆಲಸಗಳನ್ನ ಮಾಡುತ್ತಿದ್ದು  ಇದನ್ನು ನೋಡಿದ ಜಾಫರ್ ನಮ್ಮ ಬಾವನಿಗೆ ಹೇಳಿ ನಿನಗೆ ಒಂದು ಒಳ್ಳೆ ಕೆಲಸ ಕೋಡಿಸುತ್ತೀನಿ ಎಂದು ಅವರ ಅಕ್ಕನ ಅಪಾಟ್ಮೆಂಟ್ ಗೆ  ಕರೆದುಕೊಂಡು ಹೋಗಿ ಈಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ.

ಮತ್ತೊಂದು ಮದುವೆ: ನಾನು ನಿನ್ನ ಮದುವೆಯಾಗುತ್ತೀನಿ, ನೀನೆಂದರೆ ನನಗೆ ಇಷ್ಟ ಅದಕ್ಕೆ ಈ ರೀತಿ ಮಾಡಿದೆ. ಮನೆಯವರನ್ನ ಒಪ್ಪಿಸಿ ನಿನ್ನ ಮದುವೆಯಾಗುತ್ತೀನಿ. ಅಲ್ಲಿವರೆಗೂ ಈ ವಿಷಯ ಯಾರಿಗೂ ಹೇಳಬೇಡ ಎಂದು ಯಾಮಾರಿಸಿದ್ದಾನೆ. ಫೋನ್ ಸ್ವಿಚ್ ಆಫ್ ಆದರೆ ಸಾಕು ಕಾಲೇಜಿನ ಬಳಿ ಬಂದು ಎಲ್ಲರ ಮುಂದೆ ಹಲ್ಲೆ ಮಾಡುತ್ತಿದ್ದ. ಬೆತ್ತಲೆ ಫೋಟೋಗಳನ್ನು ಕಳುಹಿಸು ಎಂದು ಕಿರುಕುಳ ನೀಡುತ್ತಿದ್ದ. ಆದರೆ ಈಗ ನೀನು ನನಗೆ ಬೇಡ ಎಂದ ಮತ್ತೊಂದು ಮದುವೆಯಾಗಿದ್ದಾನೆ.

ಜಾಫರ್ ನಡವಳಿಕೆಯಲ್ಲಿ ಬದಲಾವಣೆ ಕಂಡ ನಾನು ತನ್ನ ಪ್ರೇಮದ ವಿಷಯವನ್ನು ಜಾಫರ್‍ ನ ಅಕ್ಕ ಮತ್ತು ಬಾವನಿಗೆ ತಿಳಿಸಿದರೆ. ಜಾಫರ್ ಮಾಡಿದ ತಪ್ಪನ್ನು ಸರಿ ಮಾಡಿಸುವುದನ್ನು ಬಿಟ್ಟು ಅವರು ಕೆಲವು ಪತ್ರಗಳಿಗೆ ಸಹಿಮಾಡಿಸಿಕೊಂಡಿದ್ದಾರೆ. ಪರಸ್ಪರ ಒಪ್ಪಿಗೆ ಮೂಲಕ ನಾವಿಬ್ಬರು ಬೇರೆಯಾಗುತ್ತಿದ್ದೇವೆ. ಮುಂದೆ ಏನೇ ಆದರೂ ನಮಗೆ ಸಂಬಂಧವಿಲ್ಲ ಎಂದು ಪತ್ರದಲ್ಲಿ ಬರೆಯಲಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಜಾಫರ್ ಮದುವೆಯನ್ನು ನಿಲ್ಲಿಸಲು ಕೋರ್ಟ್ ನಿಂದ ತಡೆಯನ್ನು ತಂದರೂ ಮರೆಯಲ್ಲಿ ಪೊಲೀಸರು ಆತನಿಗೆ ಸಹಾಯ ಮಾಡುತ್ತಿದ್ದಾರೆ ಎಂದು ನೊಂದ ಯುವತಿ ಅರೋಪಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

love, sex Dhoka ಬೆತ್ತಲೆ ಅಂಗಡಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ