ಮಹಿಳೆಯ ಬ್ಯಾಗ್‌ನಲ್ಲಿ ಗುಂಡುಗಳು ಪತ್ತೆ

20 bullets found in women bang in metro

22-01-2018

ದೆಹಲಿ: ಮೆಟ್ರೊ ರೈಲಿನಲ್ಲಿ ಆಯುಧಗಳು, ಪಿಸ್ತೂಲ್, ಬಂದೂಕು, ಗುಂಡುಗಳು, ಸ್ಪೋಟಕಗಳು, ಸೀಮೆಎಣ್ಣೆ, ಪಟಾಕಿ ಇತ್ಯಾದಿಗಳನ್ನು ಸಾಗಿಸಬಾರದೆಂಬ ಕಟ್ಟುನಿಟ್ಟಿನ ನಿಯಮವಿದೆ. ಹೀಗಿದ್ದರೂ ಕೂಡ, ದೆಹಲಿ ಮೆಟ್ರೊದಲ್ಲಿ ಪ್ರಯಾಣಿಸಲು ಬಂದ ಮಹಿಳೆಯೊಬ್ಬಳ ಬ್ಯಾಗಿನಲ್ಲಿ 20 ಸಜೀವ ಗುಂಡುಗಳು ಪತ್ತೆಯಾಗಿವೆ. ದೆಹಲಿಯ ಆದರ್ಶನಗರ ಮೆಟ್ರೊ ಸ್ಟೇಷನ್‌ನಲ್ಲಿ ಸಿಐಎಸ್‌ಎಫ್‌ ಅಂದರೆ ಕೇಂದ್ರೀಯ ಔದ್ಯೋಗಿಕ ಸುರಕ್ಷತಾ ಪಡೆಯ ಯೋಧರು ಈ ಮಹಿಳೆಯ ಬ್ಯಾಗ್ ಅನ್ನು ಸ್ಕ್ಯಾನ್ ಮಾಡಿದಾಗ ಗುಂಡುಗಳು ಪತ್ತೆಯಾಗಿವೆ. ಆ ಸಂದರ್ಭದಲ್ಲಿ, ಈ ಮಹಿಳೆಯ ಜೊತೆಗಿದ್ದ ಆಕೆಯ ತಂದೆ, ತನ್ನಲ್ಲಿ ಪಿಸ್ತೂಲ್ ಪರವಾನಗಿ ಇದೆ ಎಂದು ಅದನ್ನು ತೋರಿಸಿದ್ದಾರೆ. ಹೀಗಿದ್ದರೂ, ಇವರ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಗಣರಾಜ್ಯೋತ್ಸವ  ಹತ್ತಿರ ಬರುತ್ತಿದ್ದಂತೆ ದೆಹಲಿಯ ಬಸ್ ನಿಲ್ಗಾಣ ಮತ್ತು ಮೆಟ್ರೊ ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತೆ ಮತ್ತು ತಪಾಸಣೆ ಕೈಗೊಳ್ಳಲಾಗುತ್ತಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Delhi metro Bombs ತಪಾಸಣೆ ಪಿಸ್ತೂಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ