ಕಾಂಗ್ರೆಸ್ ವಿರುದ್ಧ ಆರ್.ಅಶೋಕ್ ವಾಗ್ದಾಳಿ

R.ashok press meet in BJP office

22-01-2018

ಬೆಂಗಳೂರು: ಕರ್ನಾಟಕದಲ್ಲಿ ಪೊಲೀಸರಿಗೇ ರಕ್ಷಣೆ ಇಲ್ಲ, ಇದು ಬಹಳ ಶೋಚನೀಯ ಸಂಗತಿ ಎಂದು, ರಾಜ್ಯ ಸರ್ಕಾರದ ವಿರುದ್ಧ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಗೂಂಡಾಗಳೇ ಬೆಂಗಳೂರನ್ನ ನಡೆಸುತ್ತಿದ್ದಾರೋ ಗೊತ್ತಿಲ್ಲ, ಸಂಕ್ರಾಂತಿ ದಿನ ಐದು ಸರ ಕಳ್ಳತನ ಪ್ರಕರಣಗಳು ನಡೆದಿವೆ. ಮೊದಲು ರೌಡಿಗಳು ಹೆದರಿ ಓಡಿಹೋಗುತ್ತಿದ್ದರು, ಆದರೆ ಇಂದು ಅದೇ ಪೊಲೀಸ್ ಎಸಿಪಿಯವರ ಮನೆಗೆ ನುಗ್ಗಿ ಎಸಿಪಿ ಮುಂದೆಯೇ ಅವರ ಪತ್ನಿ ಸರ ಕದ್ದೊಯ್ದಿದ್ದಾರೆ. ಪೊಲೀಸರ ಮನೆಯೇ ಭದ್ರ ಇಲ್ಲ ಅಂದರೆ ಜನಗಳ ಮನೆ ಭದ್ರ ಇರುತ್ತಾ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರ ಇರುವುದರಿಂದ ಬೆಳಿಗ್ಗೆ ರಂಗೋಲಿ ಹಾಕುವ ಮೊದಲು ಪೊಲೀಸರಿಗೆ ಫೋನ್ ಮಾಡಿ ಹೆಣ್ಣು ಮಕ್ಕಳು ರಂಗೋಲಿ ಹಾಕಿ ಎಂದು ವ್ಯಂಗ್ಯವಾಡಿದ್ದಾರೆ. ಒಂದೇ ವಾರದಲ್ಲಿ 13ಪೊಲೀಲಿಸರ ಮೇಲೆ ಹಲ್ಲೆ ನಡೆದಿದೆ. ಗಾಂಜಾ ಮಾರೋರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಬೆಂಗಳೂರಿನ ವಿವಿಧೆಡೆ ಪೊಲೀಸರ ಮೇಲೆ ಹಲ್ಲೆಗಳು ನಡೆದಿವೆ, ರಾಜ್ಯದಲ್ಲಿ ಕಾನೂನು ಸುವ್ಯಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

R.Ashok Press meet ರಂಗೋಲಿ ಕಾನೂನು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ