ನಗರದಲ್ಲಿ ಸರಗಳ್ಳರ ಹೊಸ ಗ್ಯಾಂಗ್...!

maruti van and chain snatch

22-01-2018

ಬೆಂಗಳೂರು: ಬೆಂಗಳೂರಿನ ಮಹಿಳೆಯರೇ ಎಚ್ಚರ, ಇಷ್ಟುದಿನ ಬ್ಲಾಕ್ ಪಲ್ಸರ್ ಬೈಕ್ನಲ್ಲಿ ಸರಗಳ್ಳರು ತಮ್ಮ ಕೈಚಳಕ ತೋರುತ್ತಿದ್ದರು. ಆದರೆ ಇದೀಗ ಬಿಳಿ ಬಣ್ಣದ ಮಾರುತಿ ವ್ಯಾನ್ ನಲ್ಲೂ ಸರಗಳ್ಳತನಕ್ಕಿಳಿದಿರುವುದು ಬೆಳಕಿಗೆ ಬಂದಿದೆ. ಇಂತಹದೊಂದು ಘಟನೆ ನಗರದಲ್ಲಿ ನಡೆದಿದೆ. ಮಾರುತಿ ವ್ಯಾನ್ ನಲ್ಲಿ ಬಂದ ಸರಗಳ್ಳರು, ವಂದನಾ ಎಂಬ ಮಹಿಳೆಯ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ವರದಿಯಾಗಿದೆ. ನಗರದ ಎಚ್.ಎಸ್.ಆರ್.ಲೇಔಟ್ ನ, ರಸ್ತೆಯಲ್ಲಿ ವಂದನಾ ನಡೆದುಕೊಂಡು ಹೋಗುತ್ತಿದ್ದರು, ಈ ವೇಳೆ ಏಕಾಏಕಿ ಕಾರಿನಲ್ಲಿ ಬಂದಿಳಿದ ಮಹಿಳೆಯರು, ವಂದನಾ ಕತ್ತಿನಲ್ಲಿದ್ದ 65ಗ್ರಾಂ.ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಎಚ್.ಎಸ್.ಆರ್.ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ