ಪುಡಿ ರೌಡಿಗಳಿಂದ ಯುವಕರ ಮೇಲೆ ಹಲ್ಲೆ

Rowdy gang attack on 3 boys: shimogga

22-01-2018

ಶಿವಮೊಗ್ಗ: ಯುವತಿಯೊಬ್ಬಳನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡು ತಿರುಗುತ್ತಿದ್ದ ಯುವಕನ್ನು ಯುವತಿಯ ತಾಯಿ ಪುಡಿ ರೌಡಿಗಳಿಗೆ ಸುಪಾರಿ ಕೊಟ್ಟು ಹಲ್ಲೆ ಮಾಡಿಸಿರುವ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ. ಶಿವಮೊಗ್ಗ ನಗರದ ಹೊರವಲಯದ ಗೋವಿಂದಪುರ ಗ್ರಾಮದ ನಿವಾಸಿ ಧನಲಕ್ಷ್ಮಿ ಎಂಬುವರ ಮಗಳ ಮೇಲೆ ನಿತಿನ್ ಎಂಬಾತ ಕಣ್ಣು ಹಾಕಿದ್ದ. ಆಕೆಯನ್ನು ಲವ್ ಮಾಡುತ್ತಿರುವುದಾಗಿ ಗೆಳೆಯರಿಗೆ ಹೇಳಿಕೊಂಡು ತಿರುಗಾಡುತ್ತಿದ್ದು. ಈ ಮಾತುಗಳ ಯುವತಿಯ ತಾಯಿ ಧನಲಕ್ಷ್ಮಿ ಅವರ ಕಿವಿಗೆ ಬಿದ್ದಿವೆ, ಇದರಿಂದ ರೊಚ್ಚಿಗೆದ್ದ ಧನಲಕ್ಷ್ಮಿ ಪುಡಿ ರೌಡಿ ಸಂತು ಎಂಬಾತನಿಗೆ ಸುಪಾರಿ ಕೊಟ್ಟು ನಿತಿನ್ ಮತ್ತು ಆತನ ಸ್ನೇಹಿತರ ಮೇಲೆ ಹಲ್ಲೆ ಮಾಡಿಸಿದ್ದಾಳೆ.

ಘಟನೆಯಲ್ಲಿ ನಿತಿನ್ ಚೂರಿ ಇರಿತದಿಂದ ತೀವ್ರವಾಗಿ ಗಾಯಗೊಂಡಿದ್ದಾನೆ. ಈತನ ಸ್ನೇಹಿತರಾದ ರಾಜು, ಪ್ರಜ್ವಲ್, ನವೀನ್ ಎಂಬುವರೂ ಗಾಯಗೊಂಡಿದ್ದಾರೆ. ನಾಲ್ಕೂ ಜನ ಗಾಯಾಳುಗಳು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲ್ಲೆ ನಡೆಸಿದ ಪುಡಿ ರೌಡಿ ಕುಟ್ಟಿ ಮತ್ತು ಈತನ ಗೆಳೆಯರಾದ ನವೀನ್, ಪ್ರದೀಪ, ಸಂತು ಎಂಬುವರು ಪರಾರಿಯಾಗಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪುಡಿರೌಡಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rowdy Love ಪುಡಿರೌಡಿ ಘಟನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ