ಬರಲಿದೆ ‘ಡಿಜಿ ಲಾಕರ್'..!

digi locker in karnataka

22-01-2018

ಬೆಂಗಳೂರು: ಸಂಚಾರ ಪೊಲೀಸರು ಇಲ್ಲವೇ ಸಾರಿಗೆ(ಆರ್.ಟಿ.ಒ) ಅಧಿಕಾರಿಗಳು ನಿಮ್ಮ ವಾಹನ ತಪಾಸಣೆ ನನಡೆಸಿ ದಾಖಲಾತಿಗಳನ್ನು ಕೇಳಿದರೆ ಮೊಬೈಲ್‍ನಲ್ಲೇ ತೋರಿಸಬಹುದಾದ `ಡಿಜಿ ಲಾಕರ್' ವ್ಯವಸ್ಥೆ ತರಲಾಗಿದ್ದು ಅದರ ಆಧಿಕೃತ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸುವುದಷ್ಟೇ ಬಾಕಿ ಇದೆ. ದಾಖಲೆಗಳು ಹಾಗೂ ಪ್ರಮಾಣಪತ್ರಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವ, ವಿತರಿಸುವ ಮತ್ತು ದೃಢೀಕರಿಸುವ ದೇಶದ ಮೊದಲ ಸುರಕ್ಷಿತ `ಡಿಜಿ ಲಾಕರ್' ವ್ಯವಸ್ಥೆಯನ್ನು ಅಳವಡಿಸಲು ಸಾರಿಗೆ ಇಲಾಖೆ ಈ ಒಂದು ಮಹತ್ವದ ನಿರ್ಧಾರಕ್ಕೆ ಬಂದಿದೆ.

ವಾಹನ ಚಾಲನಾ ಪರವಾನಗಿ (ಡಿಎಲ್) ಮತ್ತು ನೋಂದಣಿ ಪ್ರಮಾಣಪತ್ರ (ಆರ್ಸಿ), ವಿಮೆ ಇತರ ಎಲ್ಲಾ ದಾಖಲಾತಿಗಳನ್ನು, ಡಿಜಿ ಲಾಕರ್ನಲ್ಲಿ ಸ್ಕ್ಯಾನ್ ಮೂಲಕ ಸೇವ್ ಮಾಡಿಕೊಳ್ಳಬೇಕು. ಬಳಿಕ ದಾಖಲಾತಿಗಳನ್ನು ತೋರಿಸಿದರೆ ಸಾಕು ನಿಮ್ಮ ಗಾಡಿಗಳ ದಾಖಲಾತಿಗಳು ಪರಿಶೀಲನೆ ಆದಂತೆಯೇ ಲೆಕ್ಕ. ಈಗಾಗಲೇ ಇದರ ಬಗ್ಗೆ ಸಾಧ್ಯಸಾಧ್ಯತೆಗಳ ಪರೀಶೀಲನೆ ಕೆಲಸ ಮುಗಿಸಿರುವ ಆರ್.ಟಿ.ಒ ಇನ್ನು ಕೆಲವೇ ದಿನಗಳಲ್ಲಿ ಹೊಸ ವಿಧಾನವನ್ನು ಜಾರಿ ಮಾಡಲಿದೆ.

ರಾಜ್ಯದಲ್ಲಿ ಮೊದಲ ಪ್ರಯೋಗ: ಕರ್ನಾಟಕದಲ್ಲಿ ಇದು ಯಶಸ್ವಿಯಾದರೆ ದೇಶದೆಲ್ಲೆಡೆ ಜಾರಿಗೆ ತರಲು ಕೇಂದ್ರ ಸರ್ಕಾರ ಉತ್ಸುಕವಾಗಿದೆ. ಅಷ್ಟೇ ಅಲ್ಲದೆ ಡಿಜಿ ಲಾಕರ್ನಲ್ಲಿ ಎಲ್ಲಾ ರೀತಿಯ ದಾಖಲಾತಿಗಳನ್ನು ಸೇವ್ ಮಾಡಬಹುದಾಗಿದ್ದು, ಮುಂದೊಂದು ದಿನ ಎಲ್ಲಾ ಸೇವೆಗಳಿಗೆ ಡಿಜಿ ಲಾಕರ್ ಮೂಲಕವೇ ದಾಖಲಾತಿಗಳ ಪರಿಶೀಲನೆ ನಡೆಯಲಿದೆ ಎಂದು ಸಾರಿಗೆ ಆಯುಕ್ತ ದಯಾನಂದ್ ತಿಳಿಸಿದ್ದಾರೆ.

2016ರ ಸೆಪ್ಟೆಂಬರ್ ನಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ಕಾಗದರಹಿತ ಆಡಳಿತ ಪರಿಕಲ್ಪನೆಯ ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ 'ಡಿಜಿ ಲಾಕರ್' ಅನ್ನು ಜಂಟಿಯಾಗಿ ಉದ್ಘಾಟಿಸಿದ್ದರು. ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಭ್ರಷ್ಟಾಚಾರದಿಂದ ಜನರು ತಪ್ಪಿಸಿಕೊಳ್ಳಲು ನೆರವಾಗಲು ಕೇಂದ್ರ ಸರ್ಕಾರ ಈ ಸೇವೆಯನ್ನು ಆರಂಭಿಸಿದೆ.


ಸಂಬಂಧಿತ ಟ್ಯಾಗ್ಗಳು

Digi locker digital ತಂತ್ರಜ್ಞಾನ ಭ್ರಷ್ಟಾಚಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ