‘ಜಾತ್ಯಾತೀತತೆಗೆ ದುಸ್ಥಿತಿ ಬಂದಿದೆ’

poet Marulasiddappa reaction on recent politics in karnataka

20-01-2018

ಬೆಂಗಳೂರು: ಸಾಫ್ಟ್ ಹಿಂದುತ್ವ, ಹಾರ್ಡ್ ಹಿಂದುತ್ವ, ಮೀಡಿಯಂ ಹಿಂದುತ್ವ ಹೀಗೆ ನಾನಾ ಹಿಂದುತ್ವಗಳ ಕಾಲಘಟ್ಟ ಇದು ಎಂದು ಸಾಹಿತಿ ಕೆ.ಮರುಳಸಿದ್ದಪ್ಪ ಹೇಳಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿಂದು ಮಾತನಾಡಿದ ಅವರು, ಯಾರೂ ನಾನು ಹಿಂದೂ ಅಲ್ಲ ಅಂತ ಹೇಳಿಕೊಳ್ಳಲು ಧೈರ್ಯ ತೋರುತ್ತಿಲ್ಲ, ನಾನು ಜಾತ್ಯಾತೀತ ಅನ್ನೋರೇ ಕಡಿಮೆಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಜಾತ್ಯಾತೀತತೆಗೆ ಇವತ್ತು ದುಸ್ಥಿತಿ ಬಂದಿದೆ. ಕಾಂಗ್ರೆಸ್ ನವರೂ ಈಗ ಸಾಫ್ಟ್ ಹಿಂದುತ್ವ ಪ್ರಯೋಗಕ್ಕಿಳಿದಿದ್ದಾರೆ, ನಮ್ಮ ಅಸ್ಮಿತೆಗಳನ್ನಿಟ್ಟುಕೊಂಡೇ ನಾವು ಜಾತ್ಯಾತೀತರಾಗಬಹುದು ಎಂದು ಹೇಳಿದರು. ಹಿಂದುತ್ವ ಬಂಧನದಿಂದ ಹೊರಬಂದರೆ ಮಾತ್ರ ದೇಶಕ್ಕೆ ಭವಿಷ್ಯವಿದೆ. ಹಿಂದುತ್ವದ ಸುತ್ತ ರಾಜಕೀಯ ಪಕ್ಷಗಳು ಗಿರಕಿ ಹೊಡೆಯುತ್ತಿವೆ. ಒಂದು ಪಕ್ಷ ಹಿಂದುತ್ವದ ಪರ, ಮತ್ತೊಂದು ಪಕ್ಷದ್ದು ಸಾಫ್ಟ್ ಹಿಂದುತ್ವ ಪರ ಎಂದು ಕಾಂಗ್ರೆಸ್ ಹಾಗು ಬಿಜೆಪಿ ಪಕ್ಷಗಳ ವಿರುದ್ಧ ಚಾಟಿ ಬೀಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

K.Marulasiddappa soft hindu ಹಿಂದುತ್ವ ಭವಿಷ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ