‘ಬಿಜೆಪಿಯ ಆಪರೇಷನ್ ಕಮಲ ಯಶಸ್ವಿಯಾಗಲ್ಲ’20-01-2018

ಕಲಬುರಗಿ: ಬಿಜೆಪಿ ಮತ್ತೆ ಪ್ರಾರಂಭಿಸಿರುವ ಆಪರೇಷನ್ ಕಮಲ ಯಶಸ್ವಿ ಆಗೋದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಕಲಬುರಗಿಯಲ್ಲಿಂದು ಮಾತನಾಡಿದ ಅವರು, ಬಿಜೆಪಿ ಪಕ್ಷಕ್ಕೆ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಲ್ಲದ ಹಿನ್ನೆಲೆ ಜೆಡಿಎಸ್ ಪಕ್ಷದವರನ್ನು ಸೆಳೆಯುತ್ತಿದ್ದಾರೆ ಎಂದರು.  ಮೊನ್ನೆ ಇಬ್ಬರು ಶಾಸಕರನ್ನು ಬಿಜೆಪಿ ಪಕ್ಷ ಸೆಳೆದಿದ್ದು ಈಗ ಚಿಕ್ಕಮಾದು ಅವರನ್ನು ಕಾಂಗ್ರೆಸ್ ಪಕ್ಷ ಸೆಳೆಯಲು ಯತ್ನಿಸುತ್ತಿದೆ ಎಂದು ದೂರಿದರು. ಚಿಕ್ಕಮಾದು ತಾವಾಗಿಯೇ ಹೋಗಿಲ್ಲ, ಅವರನ್ನು ಸಿಎಂ ಕರೆಸಿಕೊಂಡು ಮಾತನಾಡುತ್ತಿದ್ದಾರೆ, ಅದು ಯಶಸ್ವಿ ಆಗೋದಿಲ್ಲ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ