ಕೆಆರ್ ಎಸ್ ಹಿನ್ನೀರಿನಲ್ಲಿ ವ್ಯಕ್ತಿ ಸಾವು

A man died in KRS back water

20-01-2018

ಮಂಡ್ಯ: ಕೃಷ್ಣರಾಜ ಸಾಗರದ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋಗಿದ್ದ ಪೂವನಹಳ್ಳಿಯ ಚನ್ನವೀರನಾಯಕ(65) ಎಂಬ ವ್ಯಕ್ತಿ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನೆಡದಿದೆ. ನಿನ್ನೆ ಮೀನುಹಿಡಿಯಲು ನಿನ್ನೆ ಹರಿಗೋಲಿನೊಂದಿಗೆ ತೆರಳಿದ್ದು, ಈ ವೇಳೆ ಅವಘಡ ಸಂಭವಿಸಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಎಷ್ಟು ಹೊತ್ತಾದರು ಚೆನ್ನವೀರನಾಯಕ ಮನೆಗೆ ಬಾರದಿದ್ದು ಅನುಮಾನಗೊಂಡ ಕುಟುಂಬಸ್ಥರು ದೂರು ದಾಖಲಿಸಲು ಮುಂದಾಗಿದ್ದು, ಅದಾಗಲೇ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಶವ ಮತ್ತು ಹರಿಗೋಲನ್ನು ದಡಕ್ಕೆ ತಂದು ವಾರಸುದಾರರಿಗೆ ಒಪ್ಪಿಸಿದ್ದಾರೆ. ಕೆ.ಆರ್.ಪೇಟೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಬ್ ಇನ್ಸ್ ಪೆಕ್ಟರ್ ಕೆ.ಎನ್.ಗಿರೀಶ್ ಅವರು ಪರಿಶೀಲನೆ ನಡಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

KRS Back water ಸಬ್ ಇನ್ಸ್ ಪೆಕ್ಟರ್ ಅನುಮಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ