ಕಾಡಾನೆಗಳ ದಾಳಿ ಬೆಳೆ ನಾಶ

wild elephants Destroyed the crops: Farmers in helpless

20-01-2018

ರಾಮನಗರ: ರೈತರು ಕಷ್ಟಪಟ್ಟು ಬೆಳೆಸಿದ ಮಾವು ಮತ್ತು ಹಲಸು ಮರಗಳನ್ನು ಕಾಡಾನೆಗಳು ಧ್ವಂಸ ಮಾಡಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಇನ್ನೇನು ಫಸಲು ಕೈಗೆ ಬರಬೇಕಿತ್ತು ಅಷ್ಟರಲ್ಲೇ ಕಾಡಾನೆಗಳ ದಂಡು ಬೆಳೆಯನ್ನು ನಾಶಗೊಳಿಸಿವೆ. ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯ ಕಾಡನಕುಪ್ಪೆ ಗ್ರಾಮದಲ್ಲಿ ದುರ್ಘಟನೆ ನೆಡದಿದೆ. ಇದರಿಂದ ರೈತ ತಲೆ ಮೇಲೆ ಕೈಹೊತ್ತು ಕೂತಿದ್ದಾರೆ.

ಗ್ರಾಮದ ಲೋಕೇಶ್ ಎಂಬುವರ ಹಲಸಿನಮರ ಮತ್ತು ಮಾವಿನ ಮರಗಳನ್ನು ಐದು ಕಾಡಾನೆಗಳ ಹಿಂಡು ದಾಳಿ ಮಾಡಿ ನಾಶಪಡಿಸಿವೆ. ಅದಲ್ಲದೇ ಕೆ.ಸಿ.ಕೆಂಪೇಗೌಡ ಎಂಬುವರ ಎರಡು ತೆಂಗಿನಮರ, ರಾಘವೇಂದ್ರ ಎಂಬುವರ ಮೂರು ಮಾವಿನಮರ, ಕೆ.ಸಿ. ಪುಟ್ಟಸ್ವಾಮಿಗೌಡ ಎಂಬುವರ ಹಲಸಿನಮರ, ನಾಲ್ಕು ತೆಂಗಿನಮರ, ಕಾಳಲಿಂಗಯ್ಯ, ಪುಟ್ಟಸ್ವಾಮಯ್ಯ ಎಂಬುವರ ಬೋರ್ವೆಲ್ ಪೈಪ್, ತೆಂಗಿನಮರ, ಹುಣಸೆಮರ ಫಸಲನ್ನು ನಾಶಪಡಿಸಿವೆ.

ಕಳೆದ ಮೂರು ದಿನಗಳಿಂದ ಚನ್ನಪಟ್ಟಣದ ಕೂಡ್ಲೂರು ಹಾಗೂ ಹೊಂಗನೂರು ಬಳಿ ಕಾಡಾನೆಗಳು ಬೀಡು ಬಿಟ್ಟಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ತೆಂಗಿನಕಲ್ಲು ಅರಣ್ಯಕ್ಕೆ ಅಟ್ಟಿದ್ದರು. ಆದರೆ ತಡರಾತ್ರಿ ತೆಂಗಿನಕಲ್ಲು ಅರಣ್ಯದಂಚಿನ ಕಾಡನಕುಪ್ಪೆ ಗ್ರಾಮದ ತೋಟಗಳಿಗೆ ನುಗ್ಗಿ ಈ ಅವಾಂತರ ಸೃಷ್ಟಿಸಿವೆ.

 


ಸಂಬಂಧಿತ ಟ್ಯಾಗ್ಗಳು

wild elephants farmers ಇಲಾಖೆ ತೆಂಗಿನಮರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ