ಮನೆಗೆ ನುಗ್ಗಿದ ಚಿರತೆ

leopard attacked into a home:tumkur

20-01-2018

ತುಮಕೂರು: ಮನೆಯೊಂದಕ್ಕೆ ಚಿರತೆ ನುಗ್ಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಜಿಲ್ಲೆಯ ಜಯನಗರದಲ್ಲಿನ ರಂಗನಾಥ್ ಎಂಬುವರ ಮನೆಗೆ ಏಕಾಏಕಿ ಚಿರತೆ ನುಗ್ಗಿದ್ದು ಭಯದಿಂದ ದಿಕ್ಕಾಪಾಲಾಗಿ ಓಡಿದ ಕುಟುಂಬ ಸದಸ್ಯರು, ಮನೆಯ ಸ್ನಾನಗೃಹದಲ್ಲಿ ಬಚ್ಚಿಟ್ಟುಕೊಂಡು ತಮ್ಮನ್ನು ರಕ್ಷಿಸಿಕೊಂಡಿದ್ದಾರೆ. ಮನೆಯಲ್ಲಿ ಎಲ್ಲೆಂದರಲ್ಲಿ ಒಡಾಡಿದ ಚಿರತೆ ಮನೆಯಲ್ಲೇ ಬೀಡುಬಿಟ್ಟಿದೆ. ಇನ್ನು ಸ್ಥಳೀಯರು ಘಟನೆ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ಮುಟ್ಟಿಸಿದ್ದು, ಸ್ಥಳಕ್ಕೆ ಅರಣ್ಯ ಸಿಬ್ಬಂದಿ ದೌಡಾಯಿಸಿದ್ದಾರೆ. ಯಾರಿಗೂ ಹಾನಿಯಾಗದಂತೆ ಚಿರತೆ ಹಿಡಿಯಲು ಅರಣ್ಯ ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಚಿರತೆಯನ್ನು ವೀಕ್ಷಿಸಲು ಸ್ಥಳದಲ್ಲಿ  ಜನರ ಜಮಾಯಿಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

leapord forest officers ಹರಸಾಹಸ ಸ್ನಾನಗೃಹ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ