ಬಳ್ಳಾರಿಯಲ್ಲಿ ಆತಂಕಕಾರಿ ಘಟನೆ

100

20-01-2018

ಬಳ್ಳಾರಿ: ಬಳ್ಳಾರಿಯಲ್ಲೊಂದು ಆತಂಕಕಾರಿ ಘಟನೆ ನಡೆದಿದೆ. ಜಿಲ್ಲೆಯ ಹೊಸಪೇಟೆ ತಾಲ್ಲೂಕಿನಲ್ಲಿ ಅನಂತಶಯನಗುಡಿ ಎಂಬಲ್ಲಿ ಕೋಳಿಗಳ ಮಾರಣ ಹೋಮ ನಡೆದಿದೆ. ನಿನ್ನೆ ತಡರಾತ್ರಿ ಗ್ರಾಮಕ್ಕೆ ನುಗ್ಗಿದ ಪ್ರಾಣಿಯೊಂದು ನೂರಕ್ಕೂ ಹೆಚ್ಚು ಕೋಳಿಗಳ ಮೇಲೆ ದಾಳಿ ಮಾಡಿ, ರಕ್ತಹೀರಿ ಕೊಂದು ಕೋಳಿಗಳನ್ನು ಹಾಗೆ ಬಿಟ್ಟು ಹೋಗಿದೆ. ಮೇಲ್ನೋಟಕ್ಕೆ ಇದಕ್ಕೆಲ್ಲಾ ಚಿರತೆ ಕಾರಣ ಎನ್ನಲಾಗುತ್ತಿದ್ದು ಘಟನೆಯಿಂದ ಗ್ರಾಮದ ಜನತೆ ಭಯಗೊಂಡಿದ್ದಾರೆ. ಇಷ್ಟೊಂದು ಕೋಳಿಗಳ ಮೇಲೆ ದಾಳಿ ಮಾಡಿದ್ದು ಇದೇ ಮೊದಲು ಬಾರಿ ಎನ್ನಲಾಗಿದೆ. ಗ್ರಾಮದ ರಸ್ತೆಯೂದ್ದಕ್ಕೂ‌ ಮೃತ ಕೋಳಿಗಳು ಬಿದ್ದಿದ್ದು, ಕೋಳಿ ಮೊಟ್ಟೆಗಳನ್ನೂ ‌ಬಿಟ್ಟಿಲ್ಲ. ಘಟನೆ ಕುರಿತಂತೆ ಮಹಿಳೆಯೊಬ್ಬರು ಹೇಳಿದ ಪ್ರಕಾರ, ಅದೊಂದು ಕಪ್ಪುಬಣ್ಣದ ಪ್ರಾಣಿ ಎಂದಿದ್ದಾರೆ. ಇದರಿಂದ ಗ್ರಾಮದಲ್ಲಿ ಆತಂಕ ಮನೆಮಾಡಿದೆ. ಅಲ್ಲದೇ ಸ್ಥಳಕ್ಕೆ ಬಾರದ ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಭಯ chicken ಆತಂಕ ಚಿರತೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ