ಶತಾಯುಷಿ ದೊರೆಸ್ವಾಮಿಯವರಿಗೆ ಶುಭಾಶಯ ಕೋರಿದ ಗೃಹ ಸಚಿವ ಜಿ. ಪರಮೇಶ್ವರ್

Kannada News

22-04-2017

 ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೂರೆಸ್ವಾಮಿ ಅವರಿಗೆ 99 ವರ್ಷ ಪೂರೈಸಿದ ಹಿನ್ನಲೆ ದೂರೆಸ್ವಾಮಿ ನಿವಾಸಕ್ಕೆ ಗೃಹ ಸಚಿವ ಜಿ. ಪರಮೇಶ್ವರ್ ಭೇಟಿ ನೀಡಿದರು.ಜಯನಗರದಲ್ಲಿರುವ ದೂರೆಸ್ವಾಮಿ ನಿವಾಸಕ್ಕೆ ಭೇಟಿ ನೀಡಿ ಶಾಲು ಹೊದಿಸಿ ಸನ್ಮಾನಿಸಿದ ನಂತರ ಗೃಹ ಸಚಿವ ಪರಮೇಶ್ವರ್ ಮಾತಾನಾಡಿದರು. ದೊರೆಸ್ವಾಮಿಯವರು ಇನ್ನು ಹೆಚ್ವು ಕಾಲ ಬದುಕಲಿ. ನಾಡಿನ ಯಾವುದೇ ಸಮಸ್ಯೆ ಇದ್ದರು ಮುಂದೆ ನಿಂತು ಹೋರಾಟ ಮಾಡುತ್ತಾರೆ. ಮುಂದೆ ಶತಾಯುಷಿ ಕಾರ್ಯಾಕ್ರಮವನ್ನ ನಡೆಸಲಾಗುವುದು ಎಂದರು.                        
ಇದೇ ವೇಳೆ ಮಾತಾನಾಡಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ. ಜಿ. ಪರಮೇಶ್ವರ್ ತುಂಬ ಮೆದು ಜೀವಿ. ಅವರು ಇನ್ನು ಸ್ವಲ್ಪ ಗಟ್ಟಿತನ ತೋರಬೇಕು. ಅವರ ಇಲಾಖೆಯಲ್ಲಿ ಪೊಲೀಸರು ಏನೆಲ್ಲಾ ಕೆಲಸಗಳನ್ನ ಮಾಡುತ್ತಿದ್ದಾರೆ. ಅವರಿಗೆ ಬಿಸಿ ಮುಟ್ಟಿಸಬೇಕಾದ್ರೆ ಇವರು ಗಟ್ಟಿತನ ತೋರಬೇಕು ಎಂದರು.

ಆನಂತರ ಮಾತನಾಡಿದ ಪರಮೇಶ್ವರ್ ಇವರಿಗೂ ಗೊತ್ತಿದೆ ಪೊಲೀಸರು ಯಾವ ಪ್ರಕರಣಗಳಲ್ಲಿ ಹೇಗೆ ಕೆಲಸ ಮಾಡುತ್ತಾರೆ ಎಂದು, ನಿತೀಶ್ ಕುಮಾರ್ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಮಹಾಘಟಬಂಧನ ಸಲುವಾಗಿ ಮಾತುಕತೆ ನಡೆಸಿದ್ದಾರೆ ಎಂದು ಮಾಧ್ಯಮಗಳಲ್ಲಿ ನೋಡಿದ್ದೇನೆ. ಆದರೆ ಅವರು ಏನು ಮಾತನಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಕೋಮುವಾದಿಗಳನ್ನು  ದೂರು ಇಡಲು ಆ ರೀತಿಯ ಚಿಂತನೆ ಒಳ್ಳೆಯದು ಎಂದು ಗೃಹ ಸಚಿವ ಪರಮೇಶ್ವರ್ ಹೇಳಿಕೆ ನೀಡಿದರು.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ