ಬೆಳ್ಳಂದೂರು ಕರೆಯಲ್ಲಿ ಮತ್ತೆ ಬೆಂಕಿ

again fire catches in bellandur lake

20-01-2018

ಬೆಂಗಳೂರು: ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಬೆಂಕಿ ಅವಾಂತರ ಸೃಷ್ಟಿಸಿದೆ. ರಾತ್ರಿ ಇಡೀ ಹತ್ತಿಕೊಂಡು ಉರಿದ ಬೆಂಕಿ, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಇದರಿಂದ ಬೆಳ್ಳಂದೂರು ಕೆರೆಯ ಸುತ್ತಮತ್ತ ದಟ್ಟ ಹೊಗೆ ಆವರಿಸಿದೆ. ರಾಸಾಯನಿಕಯುಕ್ತ ತ್ಯಾಜ್ಯ ನೀರು ಕರೆಗೆ ಬಿಡುತ್ತಿದ್ದು ಇದಕ್ಕೆ ಪ್ರಮುಖ ಕಾರಣವಾಗಿದೆ. ಈ ಹಿಂದೆಯೂ ಹಲವು ಬಾರಿ ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇನ್ನು ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುವಂತಾಗಿದೆ. ರಾತ್ರಿಯಿಡಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿನಂದಿಸುವ ಕಾರ್ಯಚರಣೆ ನಡೆದ್ದಾರೆ. ಎರಡು ತಿಂಗಳ ಹಿಂದಷ್ಟೇ ಹಸಿರು ನ್ಯಾಯಾಧಿಕರಣ, ಕೆರೆ ಕ್ಲೀನ್ ಮಾಡುವಂತೆ ಆದೇಶಿಸಿತ್ತು. ಆದರೂ ಈ ಕುರಿತು ಸೂಕ್ತ ಕ್ರಮಕೈಗೊಳ್ಳದಿದ್ದು, ಇದೀಗ ಮತ್ತೆ ಬೆಂಕಿ ಕಾಣಿಸಿಕಂಡಿದೆ. ಬೆಳ್ಳಂದೂರು ಕೆರೆ ಬೆಂಕಿಯಿಂದಾಗಿ ಅಕ್ಕಪಕ್ಕದ ಗ್ರಾಮಸ್ಥರೂ ಕೂಡ ಆತಂಕಕ್ಕೀಡಾಗಿದ್ದಾರೆ.


ಸಂಬಂಧಿತ ಟ್ಯಾಗ್ಗಳು

bellandur lake Fire engine ಆದೇಶ ಅಗ್ನಿಶಾಮಕದಳ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ