ಅನಂತ್ ಕುಮಾರ್ ಹೆಗಡೆ ಕಾರಿಗೆ ಮುತ್ತಿಗೆ

Dalith organisations protest against ananth kumar hegde

20-01-2018

ಬಳ್ಳಾರಿ: ಬಳ್ಳಾರಿಯಲ್ಲಿಂದು ಆಯೋಜಿಸಿರುವ ಉದ್ಯೋಗ ಮೇಳಕ್ಕೆ ಚಾಲನೆ ನೀಡಲು, ಬಳ್ಳಾರಿಗೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಆಗಮಿಸಿದ್ದು, ಅವರ ಕಾರಿಗೆ ದಲಿತ ಸಂಘಟನೆಗಳ ಕಾರ್ಯಕರ್ತರು ಮುತ್ತಿಗೆ ಹಾಕಿರುವ ಘಟನೆ ನಡೆದಿದೆ.

ಕೇಂದ್ರ ಕೌಶಲ್ಯಾಭಿವೃದ್ಧಿ ಇಲಾಖೆ ಮತ್ತು ಸ್ಥಳೀಯ ಚೇಂಬರ್ಸ್ ಆಫ್ ಕಾಮರ್ಸ್ ನಿಂದ, ಬಳ್ಳಾರಿಯ ಆರ್ವೈಎಂಸಿ ಕಾಲೇಜು ಆವರಣದಲ್ಲಿ ಉದ್ದೋಗ ಮೇಳೆ ಆಯೋಜಿಸಿದ್ದು, ಕಾರ್ಯಕ್ರಮ ಉದ್ಘಾಟಿಸಲು ಅನಂತ್ ಕುಮಾರ್ ಹೆಗಡೆ ಬಳ್ಳಾರಿಗೆ ಆಗಮಿಸಿದ್ದಾರೆ. ಈ ವೇಳೆ ಸಂವಿಧಾನ ವಿರೋಧಿ ಹೇಳಿಕೆ ಹಿನ್ನೆಲೆ ಬಳ್ಳಾರಿಯ ದಲಿತ ಸಂಘಟನೆಗಳು ಅನಂತ್ ಕುಮಾರ್ ಹೆಗಡೆ ಕಾರಿಗೆ ಮುತ್ತಿಗೆ ಹಾಕಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಬಳ್ಳಾರಿಯ ಪ್ರವಾಸಿ ಮಂದಿರದ ಬಳಿ ಘಟನೆ ನಡೆದಿದೆ. ಕಪ್ಪು ಬಾವುಟ ತೋರಿಸಿದ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸಂಸದ ರಾಮುಲು ಅವರು ಸಂಧಾನಕ್ಕೆ ಯತ್ನಿಸಿದ್ದಾರೆ, ಆದರೂ ಸಂಧಾನ ವಿಫಲವಾಗಿದ್ದು ಪ್ರತಿಭಟನೆ ಮುಂದುವರೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ