ಯಾದಗಿರಿಯಲ್ಲಿ ಸರಣಿ ಕಳ್ಳತನ

serial theft in yadgir

20-01-2018

ಯಾದಗಿರಿ: ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕೆಂಭಾವಿ ಪಟ್ಟಣದಲ್ಲಿ ಸರಣಿ ಕಳ್ಳತನ ನಡೆದಿದೆ. ಸುಮಾರು 7 ಅಂಗಡಿಗಳಿಗೆ ಕನ್ನ ಹಾಕಿದ ಖದೀಮರು ನಗದು ಸೇರಿದಂತೆ ಲಕ್ಷಾಂತರ ಮೌಲ್ಯದ ವಸ್ತಗಳನ್ನು ಲಪಟಾಯಿಸಿದ್ದಾರೆ. ಬಾರ್, ಕಿರಾಣಿ ಅಂಗಡಗಳಲ್ಲಿ ತಮ್ಮ ಕೈಚಳಕ ತೋರಿರುವ ಕಳ್ಳರು, ಮದ್ಯವನ್ನೂ ಬಿಡದೇ ಕದ್ದೊಯ್ದಿದ್ದಾರೆ. ಸುಮಾರು 4 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಕಳವಾಗಿವೆ ಎಂದು ಅಂದಾಜಿಸಲಾಗಿದೆ. ಮಾಲೀಕರು ಎಂದಿನಂತೆ ವ್ಯಾಪಾರಕ್ಕಾಗಿ ಅಂಗಡಿ ಬಾಗಿಲು ತರೆಯಲು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಸ್ಥಳಕ್ಕಾಗಮಿಸಿದ ಕೆಂಭಾವಿ ಪೊಲೀಸರು, ಶ್ವಾನಗಳಿಂದ ಅಂಗಡಿಗಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಕಳ್ಳರಿಗಾಗಿ ಶೋಧ ನಡೆಸಿದ್ದಾರೆ. ಕಳ್ಳತನದಿಂದ ಅಂಗಡಿ ಮಾಲೀಕರು ಮತ್ತು ಸ್ಥಳೀಯರು ಆತಂಕಗೊಂಡಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

serial theft Bar ಕಿರಾಣಿ ಶೋಧ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ