‘ಬಿಜೆಪಿಯವರ ಮಿಷನ್ 150 ಆಟ ನಡೆಯಲ್ಲ’

BJP

19-01-2018

ಕಲಬುರಗಿ: ಜೆಡಿಎಸ್‌ನ ಇಬ್ಬರು ಶಾಸಕರ ಪಕ್ಷಾಂತರ ವಿಚಾರವಾಗಿ ಪ್ರತಿಕ್ರಿಯಿಸಿದ ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರ ಸ್ವಾಮಿ, ಅವರು ಪಕ್ಷ ಬಿಡುತ್ತಾರೆ ಎಂದು ಎರಡು ವರ್ಷದ ಹಿಂದೆಯೇ ತಿಳಿದಿತ್ತು ಎಂದು ಹೇಳಿದ್ದಾರೆ. ಕಲಬುರಗಿಯಲ್ಲಿಂದು ಮಾತನಾಡಿದ ಅವರು, ಇಬ್ಬರು ಶಾಸಕರು ಎರಡು ದೋಣಿಗಳಲ್ಲಿ ಕಾಲಿಟ್ಟಿದ್ದು ಎರಡು ವರ್ಷದ ಹಿಂದೆಯೇ ಬಿಜೆಪಿ ಸೇರ್ಪಡೆಯಿಂದ ಪಕ್ಷಕ್ಕೆ ಆನೆ ಬಲ ಬಂದಿದೆ ಎಂದು, ಬಿಎಸ್‌ವೈ ಹೇಳುತ್ತಾರೆ. ಇದುವರೆಗೆ ಇಬ್ಬರು ಶಾಸಕರು ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸಿಲ್ಲ, ಅದಕ್ಕಾಗಿಯೇ ರಾಯಚೂರಿನ ಜನತೆ ಅವರ ವಿರುದ್ಧ ಆಕ್ರೋಶಗೊಂಡಿದ್ದಾರೆ ಎಂದರು. ಬಿಜೆಪಿಗೆ ಬೇರೆ ಪಕ್ಷದವರನ್ನು ಸೆಳೆಯುವುದೇ ಆಯಿತು, ಇದರಿಂದಲೇ ಗೋತ್ತಾಗುತ್ತದೆ ರಾಜ್ಯದಲ್ಲಿ ಬಿಜೆಪಿಯ ವರ್ಚಸ್ಸು ಎಂತಹದು ಎಂದು ಕಿಡಿಕಾರಿದ ಅವರು, ಬಿಜೆಪಿಯವರ ಮಿಷನ್ 150 ಆಟ ನಡೆಯಲ್ಲ ಎಂದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

H.D.kumaraswamy JDS ವರ್ಚಸ್ಸು ರಾಜೀನಾಮೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ