ಮಹಿಳೆ ಅನುಮಾನಾಸ್ಪದ ಸಾವು

Woman suspicious death bengaluru

19-01-2018

ಬೆಂಗಳೂರು: ಮಹಿಳೆಯೊಬ್ಬರು ಬಾಯಿಯಲ್ಲಿ ರಕ್ತ ಬಂದು ಮೃತಪಟ್ಟಿರುವ ದುರ್ಘಟನೆ ಕೆ.ಆರ್.ಪುರಂನ ಸೀಗೆಹಳ್ಳಿಯಲ್ಲಿ ಇಂದು ಮುಂಜಾನೆ ನಡೆದಿದ್ದು ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಮೃತಪಟ್ಟವರನ್ನು ಸೀಗೆಹಳ್ಳಿಯ ಪ್ರಿಯಾಂಕ ನಗರದ ನೀಲಾ (35)ಎಂದು ಗುರುತಿಸಲಾಗಿದೆ. ಆಕೆಯ ಪತಿ ಧರ್ಮರಾಜ್ ಕತ್ತು ಬಿಗಿದು ಕೊಲೆ ಮಾಡಿಮಾಡಿದ್ದಾನೆಂದು ಶಂಕಿಸಿ ಆತನನ್ನು ವಶಕ್ಕೆ ತೆಗೆದುಕೊಂಡು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮರಗೆಲಸ ಮಾಡುತ್ತಿದ್ದ ಧರ್ಮರಾಜ್‍ನನ್ನು 10 ವರ್ಷಗಳ ಹಿಂದೆ ನೀಲಾ ಮದುವೆಯಾಗಿದ್ದು, ದಂಪತಿಗೆ 6 ವರ್ಷದ ಹೆಣ್ಣು ಹಾಗೂ 4 ವರ್ಷದ ಮಗನಿದ್ದಾನೆ.

ನೀಲಾ ಕಲ್ಯಾಣ ಮಂಟಪಗಳಿಗೆ ಅಡುಗೆ ಕೆಲಸಕ್ಕೆ ಹೋಗುತ್ತಿದ್ದು, ಇತ್ತೀಚೆಗೆ ಕೌಟುಂಬಿಕ ಕಲಹದಿಂದ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ನಿನ್ನೆ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದ ದಂಪತಿ ಜಗಳ ಮಾಡಿಕೊಂಡಿದ್ದರು. ಜಗಳವನ್ನು ನಾಲ್ಕು ವರ್ಷದ ಮಗ ನೋಡಿದ್ದ. ಬೆಳಿಗ್ಗೆ 5 ಗಂಟೆಗೆ ಧರ್ಮರಾಜ್ ಕೆಲಸಕ್ಕೆ ಹೋಗಿದ್ದು, 7ರ ವೇಳೆಗೆ ನೀಲಾ ಬಾಯಲ್ಲಿ ರಕ್ತ ಸುರಿದು ಮೃತಪಟ್ಟಿರುವುದು ಪತ್ತೆಯಾಗಿದೆ.

ತಾಯಿ ಏಳದಿದ್ದರಿಂದ ಪಕ್ಕದ ಮನೆಯಲ್ಲಿ ಮಲಗಿದ್ದ 6 ವರ್ಷದ ಮಗಳು ಕೂಗಾಡಿಕೊಂಡಿದ್ದು, ಸ್ಥಳೀಯರು ಬಂದು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಕೆ.ಆರ್.ಪುರಂನ ಪೊಲೀಸ್ ಇನ್ಸ್ ಪೆಕ್ಟರ್ ಜಯರಾಜ್ ಅವರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಮಹಿಳೆಯ ಬಾಯಲ್ಲಿ ರಕ್ತ ಬಂದಿದ್ದು, ದೇಹದ ಯಾವುದೇ ಭಾಗದಲ್ಲಾದರೂ ಗಾಯಗಳು ಕಂಡುಬಂದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಸಾವಿಗೆ ಕಾರಣ ತಿಳಿದುಬರಲಿದೆ ಎಂದು ಜಯರಾಜ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

death suspect ವರದಿ ಇನ್ಸ್ ಪೆಕ್ಟರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ