ಕಾಡಾನೆಗಳ ಜಲಕ್ರೀಡೆ: ದಂಗಾದ ಜನ

wild elephants scared people: channapatna

19-01-2018

ಬೆಂಗಳೂರು: ಚೆನ್ನಪಟ್ಟಣದ ಬಳಿಯ ಹೊಂಗನೂರು ಕೆರೆಯ ಬಳಿ ಆಹಾರ ಅರಸಿ ಕಾಡಿನಿಂದ ನಾಡಿಗೆ ಕಾಡಾನೆಗಳ ಹಿಂಡು ಜಲಕ್ರೀಡೆ ಆಡುತ್ತಿರುವುದನ್ನು ನೋಡಿದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಐದು ಕಾಡಾನೆಗಳಿದ್ದ ಹಿಂಡು ನಿನ್ನೆ ಸಂಜೆ ಹೊಂಗನೂರು ಕೆರೆಯ ಬಳಿ ಕಾಣಿಸಿಕೊಂಡಿವೆ. ಕೆರೆಗೆ ಇಳಿದಿದ್ದ ಆನೆಗಳು ಸುಮಾರು ಅರ್ಧ ಗಂಟೆಯ ಕಾಲ ಜಲಕ್ರೀಡೆ ಆಡಿ ನಂತರ ಜಾಲಿಮರದ ದಟ್ಟ ಪೊದೆಗಳ ನಡುವೆ ಬೀಡುಬಿಟ್ಟಿವೆ.

ಕೆರೆಗೆ ಆನೆಗಳ ಜಲಕ್ರೀಡೆಯನ್ನು ನೋಡಿ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಆನೆಗಳನ್ನು ಕಾಡಿಗೆ ಅಟ್ಟುವವರಗೆ ಮನೆಯಿಂದ ಜನರು ಹೊರಬರದಂತೆ ಚನ್ನಪಟ್ಟಣ ವಲಯ ಅರಣ್ಯಾಧಿಕಾರಿಗಳು ತಾಕೀತು ಮಾಡಿದ್ದಾರೆ. ನಾಡಿಗೆ ಬಂದ ಕಾಡಾನೆಗಳ ಪತ್ತೆಗಾಗಿ ಡ್ರೋನ್ ಕ್ಯಾಮೆರಾ ಬಳಸಿದ ಅರಣ್ಯ ಇಲಾಖೆ ಸದ್ಯಕ್ಕೆ ಹೊಂಗನೂರು ಕೆರೆಯ ಸಮೀಪವಿರುವ ಜಾಲಿಮರದ ದಟ್ಟ ಪೊದೆಗಳ ನಡುವೆ ಆನೆ ಹಿಂಡು ಬೀಡುಬಿಟ್ಟಿರುವುದನ್ನು ಪತ್ತೆಹಚ್ಚಿ ಅವುಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ನಡೆಸಿದ್ದಾರೆ. ತೆಂಗಿನಕಲ್ಲು ಇಲ್ಲವೆ ಕಬ್ಬಾಳು ಅರಣ್ಯ ಪ್ರದೇಶದಿಂದ ಆನೆಗಳು ಬಂದಿವೆ ಎಂದು ತಿಳಿದುಬಂದಿದೆ.


ಸಂಬಂಧಿತ ಟ್ಯಾಗ್ಗಳು

wild elephants forest ಜಲಕ್ರೀಡೆ ಆತಂಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ