ನಗರದಲ್ಲಿ ಉಗಾಂಡ ಯುವತಿಯರ ಪುಂಡಾಟ

Ugandan woman hits police constable in bengaluru

19-01-2018

ಬೆಂಗಳೂರು: ನಗರದಲ್ಲಿ ಅಫ್ರಿಕಾ ದೇಶದವರ ಪುಂಡಾಟ ಮುಂದುವರೆದಿದ್ದು ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ್ದನ್ನು ಪ್ರಶ್ನಿಸಿದ ಪೊಲೀಸ್ ಪೇದೆಗೆ ಕೆನ್ನೆಗೆ ಹೊಡೆದು ಸಮವಸ್ತ್ರ ಹರಿದು ಉಗಾಂಡ ಯುವತಿ ಹಾಗೂ ಆಕೆಯ ಸ್ನೇಹಿತ ರಂಪಾಟ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ರಂಪಾಟ ಮಾಡಿದ ಉಗಾಂಡದ ಕ್ಲಿಮೆಂಟಿನ್ ಹಾಗೂ ಕುಲಲೋ ಮುಜಿಂಗನನ್ನು ಕೆ.ಜಿ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕಿಲಾಂಬೋ ಕ್ಲಿಮೆಂಟಿನ್ ಕಳೆದ ಸಂಕ್ರಾಂತಿ ದಿನದಂದು (ಜ. 15) ಸಂಜೆ 4.30ರ ವೇಳೆ ಹೆಚ್.ಬಿ.ಆರ್.ಲೇಔಟ್ ನ ಅರಣ್ಯ ಇಲಾಖೆಯ ಕಚೇರಿ ಹಿಂಭಾಗದ ರಸ್ತೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿಕೊಂಡು ಬರುತ್ತಿದ್ದಳು.

ವಾಹನ ತಪಾಸಣೆ ನಡೆಸುತ್ತಿದ್ದ ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ಪೇದೆಗಳಾದ ಆನಂದ್, ಕಾರನ್ನು ತಡೆದು ವಿಚಾರಿಸಲು ಹೋದಾಗ ಆಕ್ರೋಶಗೊಂಡ ಕಿಲಾಂಬೋ ಕ್ಲಿಮೆಂಟಿನ್, ಪೇದೆ ಆನಂದ್ ಅವರ ಕೆನ್ನೆಗೆ ಬಾರಿಸಿ ಸಮವಸ್ತ್ರ ಹರಿಯಲು ಮುಂದಾಗಿದ್ದು, ಇದಕ್ಕೆ ಆಕೆಯ ಜೊತೆಗಿದ್ದ  ಕುಲಲೋ ಮುಜಿಂಗ ಸಹಕರಿಸಿದ್ದಾನೆ. ಕೂಡಲೇ ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸರು ತಡೆಯಲು ಹೋದರಾದರೂ, ಅವರ ಮೇಲೆಯೇ ಬಿದ್ದು ರಂಪಾಟ ಮಾಡಿದ್ದಾರೆ. ಇಬ್ಬರನ್ನೂ ವಶಕ್ಕೆ ತೆಗೆದುಕೊಂಡು ತಪಾಸಣೆ ನಡೆಸಿದಾಗ ಮಿತಿಮೀರಿ ಮದ್ಯಪಾನ ಮಾಡಿರುವುದು ಪತ್ತೆಯಾಗಿದ್ದು, ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.

 


ಸಂಬಂಧಿತ ಟ್ಯಾಗ್ಗಳು

Africa uganda ವ್ಯಾಸಂಗ ತಪಾಸಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ