100 ಕೋಟಿ: ಬೆಂಗಳೂರು ಮೂಲದ ವ್ಯಕ್ತಿ ಕೈವಾಡ..?

100 crore: suspect on man from Bangalore origin

19-01-2018

ಬೆಂಗಳೂರು: ಉತ್ತರಪ್ರದೇಶದ ಕಾನ್ಪುರದ ಮನೆಯೊಂದರಲ್ಲಿ ಬರೋಬ್ಬರಿ 97 ಕೋಟಿ ರೂ. ಮೌಲ್ಯದ ಹಳೇನೋಟುಗಳನ್ನು ವಶಪಡಿಸಿಕೊಂಡ ಪ್ರಕರಣದಲ್ಲಿ ಬೆಂಗಳೂರು ಮೂಲದ ವ್ಯಕ್ತಿಯ ಪಾತ್ರವಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 16 ಜನರನ್ನು ಬಂಧಿಸಲಾಗಿದ್ದು ಹಳೆನೋಟುಗಳನ್ನು ಬೆಂಗಳೂರು ಮೂಲದ ಹರಿ ಕೃಷ್ಣ ಎಂಬಾತ ತಮಗೆ ನೋಟುಗಳನ್ನು ಅವುಗಳ ಮುಖಬೆಲೆಯ 40% ಗೆ ಬದಲಾಯಿಸಿಕೊಡುವುದಾಗಿ ಹೇಳಿದ್ದ ಮಾಹಿತಿಯನ್ನು ಆರೋಪಿಗಳು ನೀಡಿದ್ದಾರೆ.

ಆರೋಪಿಗಳ ವಿರುದ್ಧ ದೃಢವಾದ ಸಾಕ್ಷಿಗಳನ್ನು ಸಂಗ್ರಹಿಸಿದ ನಂತರ ಅವರನ್ನು ವಶಕ್ಕೆ ಕೊಡಲು ಕೋರ್ಟ್‍ನಲ್ಲಿ ಕೇಳಲಿದ್ದೇವೆ. ಸದ್ಯ ಆರೋಪಿಗಳನ್ನ ಜನವರಿ 30ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಕಾನ್ಪುರ ಎಸ್‍ಪಿ ಅನುರಾಗ್ ಆರ್ಯ ಹೇಳಿದ್ದಾರೆ.

ಪ್ರಕರಣ ಹಲವಾರು ಕಾರಣಗಳಿಂದ ನಿಗೂಢವಾಗಿದೆ 16 ಆರೋಪಿಗಳಲ್ಲಿ ಯಾರೊಬ್ಬರೂ ಕೂಡ ತಾವು ಕೊನೆಯದಾಗಿ ಹಳೇ ನೋಟುಗಳನ್ನ ತಲುಪಿಸಬೇಕಿದ್ದ ವ್ಯಕ್ತಿಯ ಹೆಸರನ್ನು ಇದುವರೆಗೂ ಬಾಯ್ಬಿಟ್ಟಿಲ್ಲ. ಮತ್ತೊಂದು ದೊಡ್ಡ ಸಂಸ್ಥೆಯ ಮೂಲಕ ಹಣವನ್ನ ಬದಲಾವಣೆ ಮಾಡಬೇಕಿತ್ತು ಎಂದು ಕೆಲವರು ಹೇಳಿದ್ದಾರೆ. ಆದರೆ ಸಂಸ್ಥೆಯ ಹೆಸರನ್ನ ಹೇಳಿಲ್ಲ. ಕಾನ್ಪುರದ ಸಸ್ಯಶಾಸ್ತ್ರ ಪ್ರಾಧ್ಯಾಪಕ ಸಂತೋಷ್ ಯಾದವ್ ಎಂಬಾತ ಕಾನ್ಪುರ ಹಾಗೂ ಲಕ್ನೋದಿಂದ ಹಣವನ್ನ ಸಂಗ್ರಹಿಸುತ್ತಿದ್ದ. ಜೊತೆಗೆ ಹಣ ಬದಲಾವಣೆಕಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಪಶ್ಚಿಮ ಬಂಗಾಳದ ರಿಯಲ್ ಎಸ್ಟೇಟ್ ಉದ್ಯಮಿಗಳಾದ ಸಂಜೀವ್ ಅಗರ್ವಾಲ್ ಹಾಗೂ ಮನೀಷ್ ಅಗರ್ವಾಲ್ ಕಮಿಷನ್ ಏಜೆಂಟ್‍ಗಳಾಗಿ ಕೆಲಸ ಮಾಡುತ್ತಿದ್ದರು. ಹಾಗೇ ಹೈದರಾಬದ್‍ನ ಕೋಟೇಶ್ವರ್ ರಾವ್ ಬೆಂಗಳೂರಿನ ಹರಿಕೃಷ್ಣಗೆ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ. ಆರೋಪಿಗಳ ಪ್ರಾಥಮಿಕ ಹೇಳಿಕೆಯ ಆಧಾರದ ಮೇಲೆ ನಮ್ಮ ತನಿಖೆ ಈಗ ಹರಿಕೃಷ್ಣ ಮೇಲೆ ಕೇಂದ್ರೀಕೃತವಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇವರ ಜಾಲ 5 ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ದೆಹಲಿ ಹಾಗೂ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಹಳೇ ನೋಟುಗಳನ್ನ ತರಲು ಏಜೆಂಟ್‍ಗಳು ಕಾನ್ಪುರ-ವಾರಣಾಸಿ-ಕೋಲ್ಕತ್ತ-ಹೈದರಾಬಾದ್ ಮಾರ್ಗ, ಕಾನ್ಪುರ- ವಾರಣಾಸಿ- ಹೈದರಾಬಾದ್ ಮಾರ್ಗ ಹಾಗೂ ಕಾನ್ಪುರ-ಪಶ್ಚಿಮ ಉತ್ತರಪ್ರದೇಶ-ದೆಹಲಿ ಮಾರ್ಗವನ್ನು ಬಳಸುತ್ತಿದ್ದರು. ಆನಂದ್ ಖತ್ರಿ ಅವರಿಗೆ 15 ಕೋಟಿ ರೂ.ಹಣವನ್ನು ಬದಲಾಯಿಸಿ ಕೊಟ್ಟಿದ್ದಾರೆ ಎಂದು ತಿಳಿದು ಬಂದಿರುವುದಾಗಿ ವರದಿಯಾಗಿದೆ.


ಸಂಬಂಧಿತ ಟ್ಯಾಗ್ಗಳು

Old notes uttarpradesh ವಾರಣಾಸಿ ಹೈದರಾಬಾದ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ