‘ದಿನಕ್ಕೊಂದು ಆರೋಪ ಮಾಡಿದರೆ ಹೇಗೆ’..?

Ramesh kumar Questioning kumaraswamy

19-01-2018

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಆರೋಪಕ್ಕೆ, ಆರೋಗ್ಯ ಸಚಿವ ರಮೇಶ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ಕುಮಾರಸ್ವಾಮಿ ಉನ್ನತ ಹುದ್ದೆಯಲ್ಲಿದ್ದವರು, ನೋಡಿ ಮಾತನಾಡಬೇಕು. ವಾರಕ್ಕೆ ಮೂರ್ನಾಲ್ಕು ಆರೋಪಗಳನ್ನು ಮಾಡುತ್ತಾ ಹೋದ್ರೆ ಹೇಗೆ ? ಈ ಹಿಂದೆ ಗಣಿ ಅಕ್ರಮ ಅಂತಾ ಹೇಳಿದ್ದರು, ಆ ಬಗ್ಗೆ ಏನಾದರೂ ದಾಖಲೆ ಬಿಡುಗಡೆ ಮಾಡಿದ್ದಾರಾ ? ಹೋಗ್ಲಿ ದೂರು ದಾಖಲಿಸಿದ್ದಾರಾ ?ಇಲ್ಲ. ಆದರೇ ಇದೀಗ ಮತ್ತೊಂದು ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಅವರ ಬಳಿ ದಾಖಲೆ ಇದೆಯಾ?  ದಿನಕ್ಕೊಂದು ಹೀಗೆ ಸುಳ್ಳು ಹೇಳಿದರೆ ಹೇಗೆ ? ಆ ಹುದ್ದೆಗಳ ಘನತೆಗೆ ಏನಾಗಬಹುದು?ಎಂದ ಅವರು, ಅವರೆಲ್ಲಾ ಹೆಲಿಕಾಪ್ಟರ್ ನಲ್ಲಿರೋರು ನಾನು ಭೂಮಿ ಮೇಲಿದ್ದೇನೆ ಎಂದು ವ್ಯಂಗ್ಯವಾಡಿದರು.


ಸಂಬಂಧಿತ ಟ್ಯಾಗ್ಗಳು

Ramesh kumar HD kumaraswamy ಉನ್ನತ ಹುದ್ದೆ ಬಿಡುಗಡೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ