ಸಿದ್ದರಾಮಯ್ಯಗೆ ಎಸ್.ಎಂ.ಕೃಷ್ಣ ಟಾಂಗ್

SM Krishna Tong to cm Siddaramaiah

19-01-2018

ಮಂಡ್ಯ: ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು, ಮಂಡ್ಯದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಮಂಡ್ಯದ ಸೋಮನಹಳ್ಳಿಯಲ್ಲಿ ಮಾತನಾಡಿದ ಅವರು, ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ಸಂತೋಷವಾಗುತ್ತಿದೆ. ನಮ್ಮೂರು ಯಾತ್ರೆಯಲ್ಲಿ ಸೇರಿರೋದು ವಿಶೇಷವಾಗಿ ಸಂತೋಷ ತಂದಿದೆ ಎಂದರು. ಇನ್ನು ಹೋಗಬೇಕಾದ ಸ್ಥಳಗಳು ಸಾಕಷ್ಟಿವೆ ಎಂದರು.

ಬಿಜೆಪಿಗೆ ಸೇರೋರು ಇನ್ನೂ ನಾನಾ ಮಂದಿ ಇದ್ದಾರೆ. ನನ್ನ ನಡೆ ಬಗ್ಗೆ ಕಾಲದಲ್ಲಿ ಊಹಾಪೋಹಗಳಿದ್ದವು. ಈಗ ಅವೆಲ್ಲಾ ನಿವಾರಣೆಯಾಗಿವೆ. ಮಂಡ್ಯ ಜಿಲ್ಲೆಯಲ್ಲಿ ದೊಡ್ಡ ಮನ್ವಂತರ ನಡೆಯಲಿದೆ. ಆದಾಗ್ಯೂ ಊಹಾಪೋಹ ಹರಡಿಸೋರಿಗೆ ಒಳ್ಳೆ ಬುದ್ಧಿ ಕೊಡಲಿ, ಸತ್ಯಾ ಸತ್ಯತೆ ನೋಡಲಿ ಎಂದಿದ್ದಾರೆ. ಜಿಲ್ಲೆಯಲ್ಲಿ ಪ್ರಬಲವಾಗಿ ಬಿಜೆಪಿ ಪಕ್ಷ ಕಟ್ಟುತ್ತೇವೆ, ಮೋದಿ ಅವರು ನಿಷ್ಕಳಂಕ ಆಡಳಿತ ನೀಡುತ್ತಿದ್ದಾರೆ ಎಂದು, ಮೋದಿ ಆಡಳಿತವನ್ನು ಹೊಗಳಿದರು. ಈ ಆಡಳಿತದ ಪ್ರತಿಬಿಂಬವನ್ನು ಮುಂದಿನ ಬಿಜೆಪಿ ಸರ್ಕಾರದಲ್ಲಿ ನೋಡೋಕೆ ಸನ್ನದ್ಧರಾಗುತ್ತೇವೆ ಎಂದು ಹೇಳಿದ್ದಾರೆ.

ಇನ್ನು ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರಿಗೆ ಕೃಷ್ಣ ಟಾಂಗ್ ನೀಡಿದರು. ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಅವರು, ನಾನೂ ಮುಖ್ಯಮಂತ್ರಿ ಆಗಿದ್ದೆ. ಅವಾಗ ನಾನೂ ಕೂಡ ಮತ್ತೇ ನಾವೇ ಅಧಿಕಾರಕ್ಕೆ ಬರುತ್ತೇವೆ ಅಂತ ಹೇಳುತ್ತಿದ್ದೆ, ಪ್ರತಿಯೊಬ್ಬ ಮುಖ್ಯಮಂತ್ರಿ ಕೂಡ ಅದನ್ನೇ ಹೇಳಬೇಕಾಗುತ್ತದೆ ಎಂದರು. ಇಲ್ಲಿ ನೀವೇ ಆಡಳಿತ ನೋಡುತ್ತಿದ್ದೀರಿ,ಎಲ್ಲಿದೆ ಆಡಳಿತ ಇಲ್ಲಿ? ಎಲ್ಲಿದೆ ಆಡಳಿತ ಅನ್ನೋದನ್ನ ಹುಡುಕಬೇಕಿದೆ. ರಾಜ್ಯ ಸರ್ಕಾರದ ಅಭಿವೃದ್ಧಿ ಬಗ್ಗೆ ಜನ ನಿರ್ಣಯ ಕೂಡ್ತರೆ, ಇನ್ನು ಮೂರು ತಿಂಗಳಲ್ಲಿ ಅದು ಬಹಿರಂಗವಾಗುತ್ತದೆ ಎಂದು ಸಿಎಂ ಆಡಳಿತದ ವ್ಯಂಗ್ಯವಾಡಿದ್ದಾರೆ.

 ನಾನು ವಂಶ ಪಾರಂಪರ್ಯ ರಾಜಕೀಯಕ್ಕೆ ವಿರೋಧವಾಗಿರೋನು. ನಾನು ಕಾಂಗ್ರೆಸ್ ಬಿಡೋಕೆ ಅದೂ ಒಂದು ಮೂಲಭೂತ ಕಾರಣ. ನಾನು ಮತ್ತೆ ಸ್ಪರ್ಧೆ ಮಾಡಲ್ಲ. ಸ್ಪರ್ಧೆ ಮಾಡೋರಿಗೆ ಸಹಕರಿಸೋದು ನಮ್ಮ ಕೆಲಸ. ಪಕ್ಷ ತೀರ್ಮಾನಿಸೋ ಅಭ್ಯರ್ಥಿಗೆ ನಮ್ಮ ಬೆಂಬಲ ಎಂದರು.

ಮೂರು ವರ್ಷದಲ್ಲಿ ಕಳಂಕಿತ ಕೆಲಸವನ್ನ ಮೋದಿ ಮಾಡಿಲ್ಲ. ಹಿಂದಿನ ಸರ್ಕಾರಕ್ಕೆ ಹೋಲಿಕೆ ಮಾಡಿದರೆ ಈ ಸರ್ಕಾರದಲ್ಲಿ ಪಾರದರ್ಶಕತೆ, ಪ್ರಾಮಾಣಿಕ ಎದ್ದು ಕಾಣುತ್ತದೆ. ಒಳ್ಳೆಯದು ಮಾಡಬೇಕು ಅನ್ನೋ ಕಮಿಟ್ಮೆಂಟ್ ಸ್ಪಷ್ಟವಾಗಿದೆ ಎಂದರು. ಇನ್ನು ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನವರು ಯಾರನ್ನು ಬೇಕಾದರೂ ಅಧ್ಯಕ್ಷರನ್ನಾಗಿ ಮಾಡಬಹುದು. ಕಾಂಗ್ರೆಸ್ ಬಿಟ್ಟವರು ಜೊಳ್ಳು ಅನ್ನೋ ವಿಚಾರದ ಕುರಿತು, ಮೇ ತಿಂಗಳಲ್ಲಿ ಈ ಪ್ರಶ್ನೆ ಕೇಳಿ, ಉತ್ತರ ಕೊಡ್ತೀನಿ ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

S.M.krishna siddaramaiah ಊಹಾಪೋಹ ನಿವಾರಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ