ಹನಿ ಕೇಕ್ ತಿಂದು 10 ಮಕ್ಕಳು ಅಸ್ವಸ್ಥ

10 children fell ill after eating honey cake: gadag

19-01-2018

ಗದಗ: ಬೇಕರಿ ತಿನಿಸು ಹನಿ ಕೇಕ್ ತಿಂದು ಒಂದೇ ಕುಟುಂಬದ 10 ಮಕ್ಕಳು ಅಸ್ವಸ್ಥರಾಗಿವ ಘಟನೆ, ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಆದ್ರಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಉಮೇಶ ವಡ್ಡರ ಕುಟುಂಬದ ಮಕ್ಕಳು, ಲಕ್ಷೇಶ್ವರ ಪಟ್ಟಣದ ಲಕ್ಷ್ಮೀ ವೆಂಕಟೇಶ ಅಯ್ಯಂಗಾರ್ ಬೇಕರಿಯಿಂದ ತಂದಿದ್ದ ಹನಿ ಕೇಕ್ ತಿಂದು ಅಸ್ವಸ್ಥಗೊಂಡಿದ್ದಾರೆ. 19 ವರ್ಷದ ಯುವತಿ ಸೇರಿ ಎಲ್ಲರೂ 2 ರಿಂದ 14 ವಯಸ್ಸು ಒಳಗಿನ ಮಕ್ಕಳು. ತನು(2), ಅಶ್ವಿನಿ(2), ಜಯಶ್ರೀ(3), ಸಪ್ನಾ(4), ನೀಲವ್ವ(6), ಸುವರ್ಣ(7), ನೇತ್ರಾ(9), ಷಣ್ಮುಖ(14), ಉಡಚವ್ವ(19) ಅಸ್ವಸ್ಥಗೊಂಡ ಮಕ್ಕಳು.

ನಿನ್ನೆ ರಾತ್ರಿ ಮಕ್ಕಳೆಲ್ಲರೂ ಹನಿ ಕೇಕ್ ತಿಂದು ಮಲಗಿದ್ದು, ಮಧ್ಯ ರಾತ್ರಿ ವಾಂತಿ-ಬೇಧಿಯಿಂದ ನರಳಾಡಿದ್ದಾರೆ. ಇನ್ನು ಇದರಿಂದ ತೀವ್ರ ಅಸ್ವಸ್ಥಗೊಂಡಿದ್ದ ಮಕ್ಕಳನ್ನು ನಸುಕಿನಲ್ಲಿ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

honey cake GIMS ಅಸ್ವಸ್ಥ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ