ಹಳೇ ವೈಷಮ್ಯ ಹಿನ್ನೆಲೆ, ಕಳೆದ ರಾತ್ರಿ ಎರಡು ಗುಂಪುಗಳ ಮದ್ಯೆ ಗಲಾಟೆ

Kannada News

22-04-2017

ವಿಜಯಪುರ: ಹಳೇ ವೈಷಮ್ಯ ಹಿನ್ನೆಲೆ, ಕಳೆದ ರಾತ್ರಿ ಎರಡು ಗುಂಪುಗಳ ಮದ್ಯೆ ಗಲಾಟೆ ನಡೆದು ಓರ್ವನ ಕೊಲೆ, ಹಾಗೂ ಮತ್ತೋರ್ವನ ಮೇಲೆ ಹಲ್ಲೆ ನಡೆದಿದೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಕೋಳೂರ ಗ್ರಾಮದ ಹೊರ ವಲಯದಲ್ಲಿ ಸಂಭವಿಸಿದ ಈ ಘಟನೆಯ ಗಲಾಟೆಯಲ್ಲಿ ಬಸಪ್ಪ ವಾಲಿಕಾರ(30) ಸಾವು. ಹಲ್ಲೆಗೊಳಗಾದ ನಿಂಗಪ್ಪ ಹರನಾಳಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಡೆದ ಸ್ಥಳಕ್ಜೆ ಮುದ್ದೇಬಿಹಾಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎರಡು ಸಮೂದಾಯಗಳ ಮಧ್ಯೆ ಹಳೆ ವೈಷಮ್ಯ ಹಿನ್ನೆಲೆ. ಒಂದು ಕೊಮಿನಿಂದ ಮತ್ತೊಂದು ಕೋಮಿನ ವ್ಯಕ್ತಿಯ ಬರ್ಬರ ಕೊಲೆ. 35 ವರ್ಷದ ಬಸವರಾಜ ವಾಲಿಕಾರ ಸ್ಥಳದಲ್ಲೇ ಸಾವು. ನಿಂಗಪ್ಪ ಹರನಾಳ ಸ್ಥಿತಿ ಚಿಂತಾಜನಕ ಜಿಲ್ಲಾಸ್ಪತ್ರೆಗೆ ದಾಖಲು. ಮುದ್ದೇಬಿಹಾಳ ತಾಲ್ಲೂಕಿನ ಕೊಳೂರು ಗ್ರಾಮದ ಆಲಮಟ್ಟಿ ಬಲದಂಡೆ ಕಾಲುವೆ ಬಳಿ ಘಟನೆ. ಮುದ್ದೇಬಿಹಾಳದಿಂದ ಕೊಳೂರಿಗೆ ಬೈಕ್ ನಲ್ಲಿ ಬರುತ್ತಿದ್ದ ಇಬ್ಬರ ಮೇಲೆ 15 ಕ್ಕೂ ಹೆಚ್ಚು ಜನರಿಂದ ಹಲ್ಲೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ ಪರಿಶೀಲನೆ. ಹಲವು ವರ್ಷಗಳಿಂದ ಎರಡು ಕೋಮುಗಳ ಮಧ್ಯ ವೈಷಮ್ಯ ನಡೆಯುತ್ತಲೇ ಬಂದಿತ್ತು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ತುಕಡಿ ನಿಯೋಜನೆ ಮಾಡಲಾಗಿತ್ತು.  ಆದರೂ ಸಹ ಮಧ್ಯರಾತ್ರಿ ಸುಮಾರು 12  ಗಂಟೆ ವೇಳೆಗೆ ಈ ಘಟನೆ ನಡೆದಿದೆ.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ