'ಅನಂತಕುಮಾರ್ ಹೆಗಡೆ ಕೊಡುಗೆ ಏನು'..?

What is Ananth Kumar Hegde Contribution to Uttara Kannada

19-01-2018

ಕಲಬುರಗಿ: ಜನಸಾಮಾನ್ಯರ ಕೆಲಸ ಮಾಡದ ಜನಪ್ರತಿನಿಧಿಗಳು ನಾಲಾಯಕ್ ಎಂದು, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ ವಿವಾದಾತ್ಮ ಹೇಳಿಕೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷರೂ ಸಹ ಹೇಳಿಕೆಗೆ ಕೆಂಡಾಮಂಡಲರಾಗಿದ್ದಾರೆ. ಕಲಬುರಗಿಯಲ್ಲಿಂದು ಮಾತನಾಡಿದ ಅವರು, ಕೆಲಸ ಮಾಡದ ಜನಪ್ರತಿನಿಧಿಗಳು ನಾಲಾಯಕ್ ಎಂದು ಹೇಳಿರುವ ತಾವೂ ಕೂಡ ಒಬ್ಬರು ಜನಪ್ರನಿಧಿ ಅನ್ನೋದನ್ನ ಮರೆಯಬಾರದು. ಹಾಗಿದ್ದಮೇಲೆ ತಾವೂ ಕೂಡ ನಾಲಾಯಕ್ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಐದಾರು ಬಾರಿ ಸಂಸದರಾಗಿರುವ ತಾವು ಉತ್ತರ ಕನ್ನಡದ ಜಿಲ್ಲೆಗೆ ನೀಡಿದ್ದೇನೆ..? ಎಂದು ಪ್ರಶ್ನಿಸಿದ್ದಾರೆ. ಉತ್ತರ ಕನ್ನಡದಲ್ಲಿ ಒಂದೂ ಫ್ಯಾಕ್ಟರಿಯನ್ನೂ ಆರಂಭಿಸಿಲ್ಲ, ಇದ್ದ ಫ್ಯಾಕ್ಟರಿಗಳನ್ನು ಬಂದ್ ಮಾಡಿದ್ದಾರೆ, ಇದು ನೀವೂ ಒಬ್ಬರು ನಾಲಾಯಕ್ ಅನ್ನೋದನ್ನು ತೋರಿಸಿಕೊಡುತ್ತದೆ ಎಂದು ನುಡಿದರು.


ಸಂಬಂಧಿತ ಟ್ಯಾಗ್ಗಳು

H.D.Kumaraswamy Anant Kumar Hegde ರಾಜಕೀಯ ವಿವಾದಾತ್ಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ