ಶಿರಾಡಿ ಘಾಟ್ ರಸ್ತೆ ತಾತ್ಕಾಲಿ ಬಂದ್

Shiradi Ghat Road temporarily bandh

19-01-2018

ಬೆಂಗಳೂರು: ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್ ನಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುತ್ತಿರುವ ಪ್ರಯುಕ್ತ, ರಸ್ತೆಯನ್ನು ತಾತ್ಕಾಲಿಕಾಗಿ ದಿನಾಂಕ 20-01-18 ರಿಂದ ಮುಚ್ಚಲಿದ್ದು, ವಾಹನಳು ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ತಿಳಿಸಿದೆ.

ಹಾಸನದಿಂದ ಧರ್ಮಸ್ಥಳ ಮತ್ತು ಮಂಗಳೂರು ಕಡೆಗೆ ಪ್ರಯಾಣಿಸಲು ಹಾಸನ-ಬೇಲೂರು-ಮೂಡಿಗೆರೆ- ಕೊಟ್ಟಿಗೆ ಹಾರ-ಬೆಳ್ತಂಗಡಿ-ಬಿ.ಸಿರೋಡ್ ಮುಖಾಂತರ ಮಂಗಳೂರು ತಲುಪ ಬಹುದುದಾಗಿದೆ. ಸಾಮಾನ್ಯ ಬಸ್ಸುಗಳು, ಲಘು ವಾಹನಗಳು, ವಾಣಿಜ್ಯ ವಾಹನಗಳು, ಜೀಪು ಟೆಂಪೋ ಸಂಚರಿಸಬಹುದಾಗಿದೆ.

ಇನ್ನು ಸಕಲೇಶಪುರದಿಂದ ಧರ್ಮಸ್ಥಳ ಮತ್ತು ಮಂಗಳೂರಿಗೆ ಪ್ರಯಾಣಿಸಲು, ಸಕಲೇಶಪುರ-ಹಾನುಬಾಳು-ಜನ್ನಾಪುರ-ಮೂಡಿಗೆರೆ–ಕೊಟ್ಟಿಗೆಹಾರ-ಬೆಳ್ತಂಗಡಿ-ಬಿ.ಸಿ.ರೋಡ್-ಮುಖಾಂತರ ಮಂಗಳೂರು ಸೇರಬಹುದು. ಅದಲ್ಲದೇ ಹಾಸನದಿಂದ ಮಂಗಳೂರಿಗೆ ಚಲಿಸುವ ವಾಹನಗಳು, ಹಾಸನ-ಹೊಳೆ ನರಸೀಪುರ-ಕೆ.ಆರ್.ನಗರ-ಬಿಳಿಕೆರೆ ಕ್ರಾಸ್-ಹುಣಸೂರು-ಕುಶಾಲನಗರ-ಮಡಿಕೇರಿ-ಪುತ್ತೂರು-ಬಿ.ಸಿ ರೋಡ್ ಮುಖಾಂತರ, ವಾಣಿಜ್ಯ ವಾಹನಗಳು ಸೇರಿದಂತೆ ರಾಜಹಂಸ, ಐರಾವತ  ಬಸ್ಸುಗಳು, ಲಾರಿಗಳು, ಟ್ಯಾಂಕರ್ಗಳು ಮಂಗಳೂರು ತಲುಪಹದು ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.


ಸಂಬಂಧಿತ ಟ್ಯಾಗ್ಗಳು

mangalore shiradi Ghat ರಾಷ್ಟ್ರೀಯ ಹೆದ್ದಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ