ಪಿ.ಸಿ.ಮೋಹನ್ ನಿವಾಸದಲ್ಲಿ ವೆಂಕಯ್ಯ ನಾಯ್ಡು

Venkayya Naidu visited PC Mohan house

19-01-2018

ಬೆಂಗಳೂರು: ಸಂಸದ ಪಿ.ಸಿ.ಮೋಹನ್ ಅವರ ನಿವಾಸಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಆಗಮಿಸಿದ್ದಾರೆ. ಉಪರಾಷ್ಟ್ರಪತಿ ಆಗಮನದ ಹಿನ್ನೆಲೆಯಲ್ಲಿ ಮೋಹನ್ ನಿವಾಸಕ್ಕೆ ಬಿಜೆಪಿ ನಾಯಕರು ಭೇಟಿ ನೀಡಿ, ವೆಂಕಯ್ಯ ನಾಯ್ಡು ಅವರಿಗೆ ಹೂಗುಚ್ಚ ನೀಡಿ, ಹಾರ ಹಾಕಿ ಸ್ವಾಗತಿಸಿದ್ದಾರೆ.

ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಸದಾನಂದಗೌಡ, ಅನಂತ್‌ಕುಮಾರ್, ಆರ್.ಅಶೋಕ್, ವಿ.ಸೋಮಣ್ಣ, ಸಿ.ಟಿ.ರವಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ನಾರಾಯಣಸ್ವಾಮಿ, ವಿಜಯ್ ಕುಮಾರ್, ಅಶ್ವತ್ಥ ನಾರಾಯಣ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು. ಬೆಳಗಿನ ಉಪಹಾರವನ್ನು ಮೋಹನ್ ನಿವಾಸದಲ್ಲೇ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಸವಿಯಲಿದ್ದಾರೆ.


ಸಂಬಂಧಿತ ಟ್ಯಾಗ್ಗಳು

venkaiah naidu P.C mohan ಉಪರಾಷ್ಟ್ರಪತಿ ಉಪಹಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ