ಪುರುಷರನ್ನೂ ಬಿಡದ ಸರಗಳ್ಳರು

again chain snatch in bengaluru

18-01-2018

ಬೆಂಗಳೂರು: ನಗರದಲ್ಲಿ ಸರಗಳ್ಳರ ಹಾವಳಿ ನಿಲ್ಲುವಂತೆ ಕಾಣುತ್ತಿಲ್ಲ ಮಹಿಳೆಯರನ್ನು ಗರುರಿಯಾಗಿಸಿ ಸರಗಳವು ಮಾಡುತ್ತಿದ್ದ ಸರಗಳ್ಳರು ಪುರುಷರನ್ನು ಬಿಟ್ಟಿಲ್ಲ. ಅನ್ನಪೂರ್ಣೇಶ್ವರಿ ನಗರದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಯುವಕನೊಬ್ಬನ ಚಿನ್ನದ ಸರವನ್ನು ದುಷ್ಕರ್ಮಿಗಳು ಕಸಿದು ಪರಾರಿಯಾಗಿದ್ದಾರೆ.

ಅನ್ನಪೂರ್ಣೇಶ್ವರಿ ನಗರ ಬಳಿ ರಾತ್ರಿ 11.30ರ ವೇಳೆ ಖಾಸಗಿ ಕಂಪನಿಯೊಂದರ ಉದ್ಯೋಗಿ ಬಸಂತ್ ಕುಮಾರ್ ಅವರು ಹತ್ತಿರದ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಘ ಆಟೋದಲ್ಲಿ ಬಂದಿದ್ದ ದುಷ್ಕರ್ಮಿಗಳು ಅಡ್ಡಗಟ್ಟಿ ವಿಳಾಸ ಕೇಳುವ ನೆಪ ಮಾಡಿದ್ದಾರೆ. ವಿಳಾಸ ಹೇಳುವಷ್ಟರಲ್ಲಿ ಅವರ ಕತ್ತಿನಲ್ಲಿದ್ದ 15 ಗ್ರಾಂ ತೂಕದ ಚಿನ್ನದ ಸರವನ್ನು ದುಷ್ಕರ್ಮಿಗಳು ಕಸಿದು ಪರಾರಿಯಾಗಿದ್ದು, ಪ್ರಕರಣ ದಾಖಲಿಸಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

chain sanatch bengaluru ದುಷ್ಕರ್ಮಿ ಚಿನ್ನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ