ಪೊಲೀಸರ ಮೇಲೆ ರಾಡ್‍ನಿಂದ ಹಲ್ಲೆ

Attack with rod on policeman

18-01-2018

ಬೆಂಗಳೂರು: ನಗರದಲ್ಲಿ ಪೊಲೀಸರ ಮೇಲೆ ದುಷ್ಕರ್ಮಿಗಳ ಹಲ್ಲೆ ಮುಂದುವರೆದಿದ್ದು, ಕೋಡಿಗೆಹಳ್ಳಿಯ ಟಾಟಾ ನಗರದಲ್ಲಿ ನಿನ್ನೆ ತಡರಾತ್ರಿ ಪೊಲೀಸರ ಮೇಲೆ ರಾಡ್‍ನಿಂದ ಹಲ್ಲೆ ನಡೆಸಿರುವ ದುಷ್ಕರ್ಮಿಗಳು ಬಂದೂಕು ಕಸಿದು ಪರಾರಿಯಾಗಿರುವ ಘಟನೆ ಆತಂಕ ಸೃಷ್ಠಿಸಿದೆ. ಹಲ್ಲೆ ಗೊಳಗಾಗಿರುವ ಕೋಡಿಗೆಹಳ್ಳಿ ಠಾಣೆಯ ಪೊಲೀಸ್ ಪೇದೆಗಳಾದ ಪರಮೇಶ್ ಹಾಗೂ ಸಿದ್ದಪ್ಪ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಟಾಟಾನಗರದ ಬಳಿ ಐದಾರು ಮಂದಿ ದುಷ್ಕರ್ಮಿಗಳು ರಾತ್ರಿ 1ರ ವೇಳೆ ಅನುಮಾನಾಸ್ಪದವಾಗಿ ಹೋಗುತ್ತಿದ್ದ ಮಾಹಿತಿ ಆಧರಿಸಿ ಗಸ್ತಿನಲ್ಲಿದ್ದ ಪೇದೆಗಳಾದ ಪರಮೇಶ್ ಹಾಗೂ ಸಿದ್ದಪ್ಪ  ಕಾರ್ಯಾಚರಣೆ ನಡೆಸಲು  ಹೋಗಿದ್ದಾರೆ. ಪೊಲೀಸರನ್ನ ನೋಡಿ ದುಷ್ಕರ್ಮಿಗಳು ರಸ್ತೆ ಬದಿ ಅಡಗಿಕೊಂಡಿದ್ದಾರೆ. ಪೇದೆಗಳು ನೋಡಲು ಹೋದಾಗ ಏಕಾಏಕಿ ಡ್ಯಾಗರ್ ಹಾಗೂ ಕಬ್ಬಿಣದ ರಾಡಿನಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿ ದ್ದಾರೆ. ಹಲ್ಲೆ ವೇಳೆ ಕೆಳಗೆ ಬಿದ್ದ  ಬಂದೂಕನ್ನು ತಕ್ಷಣವೇ ತೆಗೆದುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಸುದ್ದಿ ತಿಳಿದ ತಕ್ಷಣ ಹೆಚ್ಚಿನ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಾತ್ರಿಯಿಡಿ ಶೋಧ ನಡೆಸಿದರಾದರೂ ದುಷ್ಕರ್ಮಿಗಳು ಪತ್ತೆಯಾಗಿಲ್ಲ. ಟಾಟಾ ನಗರದ ಬಳಿ, ನಾಲ್ವರು ಶಂಕಾಸ್ಪದವಾಗಿ ಓಡಾಡುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಇಬ್ಬರು ಪೇದೆಗಳು ಹಿಂಬಾಲಿಸಿದ್ದಾರೆ.

ದುಷ್ಕರ್ಮಿಗಳನ್ನು ವಿಚಾರಣೆ ನಡೆಸಲು ಹೋದಾಗ ಜಟಾಪಟಿ ನಡೆದಿದೆ. ಈ ವೇಳೆ ಪೇದೆ ಪರಮೇಶ್ ಹಿಂಬದಿಯಲ್ಲಿ ಹಾಕಿಕೊಂಡಿದ್ದ 303 ರೈಫಲ್ ಕೆಳಗೆ ಬಿದ್ದಿದೆ. ಅದನ್ನು ಅಲ್ಲೇ ಬಿಟ್ಟರೆ ನಮ್ಮನ್ನು ಶೂಟ್ ಮಾಡುತ್ತಾರೆಂಬ ಭಯದಿಂದ ದುಷ್ಕರ್ಮಿಗಳು ಅದನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಈ ಶಾನ್ಯ ವಿಭಾಗದ ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

ತಡರಾತ್ರಿ 1 ಗಂಟೆಗೆ ಸಾರ್ವಜನಿಕರು ಕಂಟ್ರೋಲ್ ರೂಮ್‍ಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ನಮ್ಮ ಸಿಬ್ಬಂದಿ ಹೋಗಿದ್ದರು. ನಾಲ್ವರು ಕಳ್ಳತನ ಮಾಡಲು ಬಂದಿರುವುದಾಗಿ ಮಾಹಿತಿ ಬಂದಿತ್ತು. ಬಂದೂಕು ದೋಚಿ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ದುಷ್ಕರ್ಮಿಗಳನ್ನು ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ. ಕೊಡಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Police control room ದುಷ್ಕರ್ಮಿ ಶಂಕಾಸ್ಪದ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ