‘ಬಿಜೆಪಿ ಹೈ.ಕರ್ನಾಟಕ ಅಭಿವೃದ್ಧಿ ವಿರೋಧಿಗಳು’18-01-2018

ಕಲಬುರಗಿ: ರಾಜಕಾರಣಿಗಳು ನಾಲಾಯಕ್ ಎಂಬ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆಗೆ, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ. ಕಲಬುರಗಿಯಲ್ಲಿಂದು ಮಾತನಾಡಿದ ಅವರು, ಅನಂತಕುಮಾರ್ ಹೆಗಡೆಗೆ ನಮ್ಮ ಭಾಗದ ಸಂಸ್ಕೃತಿ ಕಲಿಸಬೇಕಿದೆ, ಸಂಸ್ಕಾರವಿಲ್ಲದವರ ರೀತಿ ಹೆಗಡೆ ಮಾತನಾಡುತ್ತಿದ್ದಾರೆ.  ಆರ್.ಎಸ್.ಎಸ್. ಶಿಸ್ತಿನ ಸಿಪಾಯಿ ಎನಿಸಿಕೊಂಡವರಿಂದ ಇಂತಹ ಮುತ್ತುಗಳು ಉದುರುತ್ತಿರುವುದು ದುರಂತವೇ ಸರಿ ಎಂದರು. ಕಲಬುರಗಿಯಲ್ಲಿ ಇಷ್ಟೆಲ್ಲಾ ಭಾಷಣ ಮಾಡುವವರು ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಗೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಹೇಳಲಿ, ಬಿಜೆಪಿಯವರು ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ವಿರೋಧಿಗಳು ಎಂದು ದೂರಿದರು.


ಸಂಬಂಧಿತ ಟ್ಯಾಗ್ಗಳು

Mallikarjun Kharge Anath kumar hegde ನಾಲಾಯಕ್ ಭಾಷಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ