ಅನುಮಾನಾಸ್ಪದ ಅಪಘಾತ ವ್ಯಕ್ತಿ ಸಾವು..!

A suspicious accident Man died

18-01-2018

ಹಾಸನ: ಭಜರಂಗದಳದ ಪ್ರಾಂತ ಪ್ರಚಾರಕರೊಬ್ಬರು ಸಾವಿಗೀಡಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಸುನೀಲ್ ಸಿಂಹ (28)ಸಾವಿಗೀಡಾದ ವ್ಯಕ್ತಿ. ಹಾಸನ ಜಿಲ್ಲೆಯ ಚನ್ನರಾಯಪ್ಟಣ ಹಾಗೂ ಅರಸೀಕೆರೆ ರಸ್ತೆಯ ರುದ್ರನಹಳ್ಳಿ ಗೇಟ್ ಬಳಿ ಈ ದುರ್ಘಟನೆ ಸಂಭವಿಸಿದೆ. ಅಪಘಾತದಿಂದ ಸುನೀಲ್ ಸಿಂಹ ಮೃತಪಟ್ಟಿದ್ದಾರೆ. ಮೇಲ್ನೋಟಕ್ಕೆ ಅಪಘಾತ ಎಂದರು, ಅಪಘಾತದ ಸ್ಥಳದಲ್ಲಿಸಾಕಷ್ಟು ಅನುಮಾನಗಳಿವೆ, ತಲೆ ಹಿಂಬಂದಿ ಹಾಗೂ ಮೂಗಿನಿಂದ ರಕ್ತ ಹರಿದಿದ್ದು, ದೇಹದ ಯಾವ ಭಾಗಕ್ಕೂ ಗಾಯವಾಗಿಲ್ಲ ಎಂದು, ಮೃತನ ತಂದೆ ರಂಗನಾಥ್ ಆರೋಪಿಸಿದ್ದಾರೆ. ರಂಗನಾಥ್ ಅವರು ಅರಸೀಕೆರೆ ಪುರಸಭೆಯ ಮಾಜಿ ಸದಸ್ಯರು. ಹಾಸನದಲ್ಲಿ ಮರಣೋತ್ತರ ಪರೀಕ್ಷೆ ಮಾಡಲು ಕುಟುಂಬಸ್ಥರ ಆಗ್ರಹಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

suspected death Bajrang Dal ಅಪಘಾತ ಪುರಸಭೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ