ಬರುವ ಚುನಾವಣೆಯಲ್ಲಿ ಪಾಠ ಕಲಿಸಲು ಸಜ್ಜಾಗಿದ್ದೇವೆ : ರೈತ ಮುಖಂಡ ಬಾಬಾಗೌಡ ಪಾಟೀಲ್

Kannada News

21-04-2017 218

ಹುಬ್ಬಳ್ಳಿ:- ರೈತರ ನೆರವಿಗೆ ಬನ್ನಿ ಎಂದು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಮನವಿ ಮಾಡುವುದೂ ಆಯ್ತು.ಹೋರಾಟ ಮಾಡುವುದೂ ಆಯ್ತು.ಸರಕಾರಗಳಿಗೆ ಮಾನಾ ಮಯಾ೯ದೆ ಇಲ್ಲಾ ಅದಕ್ಕಾಗಿ ನಾವು ಇನ್ನು ಮುಂದೆ ಸರಕಾರಗಳಿಗೆ ಮನವಿ ಮಾಡುವುದಿಲ್ಲಾ.ಏನೇ ಇದ್ದರೂ ಬರುವ ಚುನಾವಣೆಯಲ್ಲಿ ಪಾಠ ಕಲಿಸಲು ಸಜ್ಜಾಗಿದ್ದೇವೆ.ಅಲ್ಲದೇ ಮುಂಬರುವ ಚುನಾವಣೆಗೆ ರೈತ ಸಂಘದಿಂದ ಅಭ್ಯಥಿ೯ಗಳನ್ನು ಹಾಕಲು ಚಿಂತನೆ ನಡೆಸಲಾಗುವುದು ಎಂದು ಮಾಜಿ ಕೇಂದ್ರ ಸಚಿವ ಹಾಗೂ ರೈತ ಮುಖಂಡ ಬಾಬಾಗೌಡ ಪಾಟೀಲ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಬಾಬಾಗೌಡ ಪಾಟೀಲ್ .ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರ ನೆರವಿಗೆ ಬರಬೇಕು ರೈತರು ಸತತ ಮೂರು ವಷ೯ದಿಂದ ಬರಗಾಲದ ದವಡೆಗೆ ಸಿಲುಕಿದ್ದಾರೆ.ಆ ಹಿನ್ನೆಲೆಯಲ್ಲಿ ರೈತರ ಸಾಲ ಮನ್ನಾ ಮಾಡಿ ಎಂದು ಹೋರಾಟ ಮತ್ತು ಮನವಿ ಮಾಡಿಕೊಂಡರೂ ಸರಕಾರಗಳು ಕ್ಯಾರೇ ಅನ್ನುತ್ತಿಲ್ಲಾ.ಅದಕ್ಕಾಗಿ ನಾವು ಇನ್ನಮೇಲಿಂದ ಸರಕಾರಗಳನ್ನು ಏನೂ ಕೇಳುವುದಿಲ್ಲಾ ಇನ್ನೇನೆ ಇದ್ದರೂ ಬರುವ ಚುನಾವಣೆಯಲ್ಲಿ ಪಾಠ ಕಲಿಸಲು ಸಜ್ಜಾಗಿದ್ದೇವೆ..ಆ ಹಿನ್ನೆಲೆಯಲ್ಲಿ ರೈತರಲ್ಲಿ ಜನಜಾಗ್ರುತಿ ಮೂಡಿಸಲು ಇದೇ ತಿಂಗಳು ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಬ್ರಹತ್ ರೈತರ ಸಮಾವೇಶ ನಡೆಸಿ ಸರಕಾರಗಳಿಗೆ ಎಚ್ಚರಿಕೆ ನೀಡಲಾಗುವುದು.ಅದಕ್ಕೂ ಸ್ಪಂದಿಸದಿದ್ದರೆ.ಮುಂಬರುವ ಚುನಾವಣೆಯಲ್ಲಿ ರೈತ ಸಂಘದಿಂದ ಅಭ್ಯಥಿ೯ಗಳನ್ನು ಕಣಕ್ಕಿಳಿಸಲು ಚಿಂತನೆ ನಡೆಸಲಾಗುವುದು ಎಂದರು

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ