‘ಜೆಡಿಎಸ್ ಜೊತೆ ಮೈತ್ರಿ ಇಲ್ಲ’18-01-2018

ಬೆಂಗಳೂರು: ಪ್ರಾಮಾಣಿಕರು ಬಿಜೆಪಿಗೆ ಸೇರುತ್ತಿದ್ದಾರೆ. ಬಿಜೆಪಿಗೆ ಯಾರೇ ಸೇರಿದರು ಅವರಿಗೆ ವಿಶೇಷ ಗೌರವ ಸಿಗಲಿದೆ ಎಂದು, ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಪೀಯೂಷ್‌ ಗೋಯಲ್‌ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತಷನಾಡಿದ ಅವರು, ಜೆಡಿಎಸ್ ಪಕ್ಷ ರಾಜ್ಯದ ನಿರ್ದಿಷ್ಟ ವ್ಯಾಪ್ತಿಗೆ ಸೀಮಿತವಾಗಿರುವ ಪಕ್ಷ, ಜೆಡಿಎಸ್ ಪಕ್ಷದ ಜೊತೆ ಯಾವುದೇ ಮೈತ್ರಿ ಮಾಡಿಕೊಳ್ಳಲ್ಲ ಎಂದ ಅವರು, ಮುಂದಿನ ಬಾರಿ ಬಿಜೆಪಿಯೇ ಸ್ವತಂತ್ರವಾಗಿ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೇರೆ ಪಕ್ಷಗಳಿಂದ ಬರುವವರಿಗೆ ಬಿಜೆಪಿಯಲ್ಲಿ ಸ್ವಾಗತವಿದೆ, ಬಿಜೆಪಿಗೆ ಬರುವವರಿಗೆ ಸೂಕ್ತ ಸ್ಥಾನಮಾನ ನೀಡುತ್ತೇವೆ ಎಂದರು.


ಸಂಬಂಧಿತ ಟ್ಯಾಗ್ಗಳು

Piyush Goyal Alliance ಅಧಿಕಾರ ನಿರ್ದಿಷ್ಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ