ಕಾಶಿನಾಥ್ ನಿಧನ: ದ್ವಾರಕೀಶ್-ಖರ್ಗೆ ಸಂತಾಪ

Kashinath

18-01-2018

ಕಲಬುರಗಿ: ನಟ‌ ಹಾಗು ನಿರ್ದೇಶಕ ಕಾಶಿನಾಥ್ ನಿಧನಕ್ಕೆ ಮಲ್ಲಿಕಾರ್ಜುನ ಖರ್ಗೆ ಸಂತಾಪ ಸೂಚಿಸಿದ್ದಾರೆ. ಕಲಬುರಗಿಯಲ್ಲಿಂದು ಮಾತನಾಡಿದ ಅವರು, ಕಾಶಿನಾಥ್ ಅವರು ಹಿರಿಯ ಕಲಾವಿದರಾಗಿದ್ದರು, ಕನ್ನಡ ಚಿತ್ರರಂಗದಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದರು. ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗ ಓರ್ವ ಉತ್ತಮ ಕಲಾವಿದನನ್ನು ಕಳೆದುಕೊಂಡಂತಾಗಿದೆ, ಇತ್ತೀಚೆಗೆ ಅನೇಕ ಕಲಾವಿದರು ಬಾರದ ಲೋಕಕ್ಕೆ ಹೋಗಿದ್ದಾರೆ, ಇದರಿಂದ ಕನ್ನಡ ಚಿಂತ್ರರಂಗದಲ್ಲಿ ನಮ್ಮತನ ಕಡಿಮೆಯಾಗುತ್ತಿದೆ, ಪರಭಾಷೆಯ ಹಾವಳಿ ಹೆಚ್ಚಾಗುತ್ತಿದೆ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದಿದ್ದಾರೆ.

ಇನ್ನು ಚಿತ್ರರಂಗದ ಹಿರಿಯ ನಟರಾದ ದ್ವಾರಕೀಶ್ ಸಂತಾಪ ಸೂಚಿಸಿದ್ದಾರೆ. ಕಾಶಿನಾಥ್ ಜೊತೆ ಕಳೆದ ಸಂತಸದ ಕ್ಷಣಗಳನ್ನು ನೆನೆದ ಅವರು, ಕಾಶಿನಾಥ್ ಓರ್ವ ಬುದ್ಧಿ ಜೀವಿ ಹಾಗು ಸ್ನೇಹ ಜೀವಿ, ಅವರೊಬ್ಬ ಅದ್ಭುತ ಸಿನಿಮಾ ನಿರ್ದೇಶಕ, ಅವರು ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು.


ಸಂಬಂಧಿತ ಟ್ಯಾಗ್ಗಳು

Dwarakish Mallikarjun Kharge ಚಿತ್ರರಂಗ ಕಲಾವಿದ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Muchas gracias. ?Como puedo iniciar sesion?
  • okalnhzkib
  • bridgcnybu