‘ಕಿಸ್’ ಅನ್ನು ಕದ್ದೊಯ್ದ ಕಳ್ಳರು...!

Robbery in A.P Arjun

18-01-2018

ಬೆಂಗಳೂರು: ಸ್ಯಾಂಡಲ್ ವುಡ್ನ ಖ್ಯಾತ ಡೈರೆಕ್ಟರ್ ಆಫೀಸಿನಲ್ಲಿ ಕಳ್ಳತನ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕನ್ನಡ ಚಿತ್ರರಂಗದ ನಿರ್ದೇಶಕರಾದ ಎ.ಪಿ.ಅರ್ಜುನ್ ಆಫೀಸ್ ನಲ್ಲಿ ಕಳ್ಳತನ ನಡೆದಿದೆ. ಇನ್ನೂ ಚಿತ್ರೀಕರಣ ನಡೆಯುತ್ತಿರುವ ‘ಕಿಸ್’ ಸಿನಿಮಾ ಮತ್ತು ರಾಟೆ ಸಿನೆಮಾದ ದೃಶ್ಯಗಳನ್ನು ಹೊಂದಿದ್ದ ಹಾರ್ಡ್ ಡಿಸ್ಕ್ ಕದ್ದೊಯ್ದಿದ್ದಾರೆ. ಇದೇ ತಿಂಗಳ ಜನವರಿ 7 ರಂದು, ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ನಿಮಿತ್ತ ಶುಭ ಹಾರೈಸಲು ಹೋಗಿದ್ದ ವೇಳೆ ಕಳ್ಳತನ ನಡೆದಿದೆ.

ನಾಗರಬಾವಿಯ ಎನ್.ಜಿ.ಎಫ್ ಲೇಔಟ್ ನಲ್ಲಿ ಅರ್ಜುನ್ ಅವರ ಕಚೇರಿ ಇದ್ದು, ಜನವರಿ 7 ರಂದು, ರಾತ್ರಿ 11:30ಕ್ಕೆ ಕಚೇರಿಯ ಬೀಗ ಹಾಕಿ ಯಶ್ ಮನೆಗೆ ತೆರಳಿದ್ದರು. ಮರುದಿನ ಬೆಳಿಗ್ಗೆ ಜನವರಿ 8ರಂದು ನಸುಕಿನ ಜಾವ 4:30ಕ್ಕೆ ಕಚೇರಿಗೆ ಹಿಂದಿರುಗಿದ್ದಾರೆ. ಈ ವೇಳೆ ಕಚೇರಿಯ ಬಾಗಿಲು ಓಪನ್ ಆಗಿರೋದನ್ನು ಕಂಡು ಅನುಮಾನ ಗೊಂಡು ಕಚೇರಿ ಪರಶೀಲನೆ ನಡೆಸಿದ್ದಾರೆ. ಈ ವೇಳೆ ಕಚೇರಿಯಲ್ಲಿದ್ದ ಹಾರ್ಡ್ ಡಿಸ್ಕ್, ಲ್ಯಾಪ್ ಟಾಪ್, ಮೊಬೈಲ್ ಕಳ್ಳತನವಾಗಿರುವುದು ಕಂಡುಬಂದಿದೆ. ಎ.ಪಿ.ಅರ್ಜುನ್ ಅವರ ಮಾಜಿ ಕಾರ್ ಡ್ರೈವರ್ ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದ್ದು, ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

A.P.Arjun kiss ಲ್ಯಾಪ್ ಟಾಪ್ ಹಾರ್ಡ್ ಡಿಸ್ಕ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ