ಬಸ್ಸು, ಟ್ಯಾಕ್ಸಿಗಳಿಗೆ ಜಿಪಿಎಸ್ ಕಡ್ಡಾಯ

GPS and Panic Button compulsory for taxi also buses

18-01-2018

ಅತ್ಯಾಚಾರದಂಥ ಹೀನ ಅಪರಾಧಗಳು ಹೆಚ್ಚಾಗುತ್ತಿರುವ ಇವತ್ತಿನ ಸನ್ನಿವೇಶದಲ್ಲಿ, ಸಾರ್ವಜನಿಕರ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ ಏಪ್ರಿಲ್ 1 ರಿಂದ ದೇಶದ ಎಲ್ಲ ಬಸ್‌ಗಳು ಮತ್ತು ಟ್ಯಾಕ್ಸಿಗಳಲ್ಲಿ ಜಿಪಿಎಸ್ ಅಂದರೆ ಗ್ಲೋಬಲ್ ಪೊಸಿಷನಿಂಗ್ ವ್ಯವಸ್ಥೆ ಮತ್ತು ಪ್ಯಾನಿಕ್ ಬಟನ್ ಅಂದರೆ ತುರ್ತು ಸಂದರ್ಭಗಳಲ್ಲಿ ನೆರವಿಗಾಗಿ ಒತ್ತಬಹುದಾದ ಗುಂಡಿ ಅಳವಡಿಕೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.

ಜಿಪಿಎಸ್ ಅಳವಡಿಸಿದಲ್ಲಿ, ಉಪಗ್ರಹಗಳ ನೆರವಿನಿಂದ ಯಾವುದೇ ವಾಹನ ಇರುವ ಸ್ಥಳವನ್ನು ನಿಖರವಾಗಿ ಗುರುತಿಸಬಹುದು. ಸರ್ಕಾರದ ಈ ಕ್ರಮದಿಂದ ಪ್ರಯಾಣಿಕರು ತುರ್ತು ಸಂದರ್ಭಗಳಲ್ಲಿ ಪೊಲೀಸರನ್ನು ಮತ್ತು ಸಾರಿಗೆ ಸಂಸ್ಥೆ ಅಧಿಕಾರಿಗಳನ್ನು ಸಂಪರ್ಕಿಸಲು ನೆರವಾಗುತ್ತದೆ. ಯಾವುದೇ ಸಂಸ್ಥೆಯವರೂ ಕೂಡ, ತಮ್ಮ ವಾಹನ ಎಲ್ಲಿದೆ, ನಿಗದಿತ ಮಾರ್ಗದಲ್ಲಿ ಚಲಿಸುತ್ತಿದೆಯೇ ಇಲ್ಲವೇ ಅನ್ನುವ ಮಾಹಿತಿಗಳನ್ನೂ ಕೂಡ ಪಡೆದುಕೊಳ್ಳಬಹುದು. ಆಟೋಗಳು ಮತ್ತು ಎಲೆಕ್ಚ್ರಿಕ್  ರಿಕ್ಷಾಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಒಟ್ಟಿನಲ್ಲಿ ಸರ್ಕಾರದ ಈ ಕ್ರಮ, ಪ್ರಯಾಣಿಕರ ಅದರಲ್ಲೂ ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ಮತ್ತೊಂದು ಹೆಜ್ಜೆ ಎಂದು ಹೇಳಬಹುದು.


ಸಂಬಂಧಿತ ಟ್ಯಾಗ್ಗಳು

panic button GPS ಎಲೆಕ್ಚ್ರಿಕ್ ಉಪಗ್ರಹ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ