ಅಪಘಾತದಲ್ಲಿ ಎಎಸ್ಐ ದುರ್ಮರಣ

Accident ASI Died: chikkaballapura

18-01-2018

ಚಿಕ್ಕಬಳ್ಳಾಪುರ: ಅಪಘಾತವೊಂದರಲ್ಲಿ, ಕರ್ತವ್ಯ ನಿರತ ಎಎಸ್ಐ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆಯು, ಚಿಂತಾಮಣಿ ತಾಲ್ಲೂಕು ಕಲ್ಲಹಳ್ಳಿ ಬಳಿ ನಡೆದಿದೆ. ಮುನಿಯಪ್ಪ ಮೃತ ಎಎಸ್ಐ. ಚಿಂತಾಮಣಿ ಗ್ರಾಮಾಂತರ ಠಾಣೆಯ ಕೈವಾರ ಹೊರಠಾಣೆಯಲ್ಲಿ ಮುನಿಯಪ್ಪ ಅವರು ಕಾರ್ಯನಿರ್ವಹಿಸುತ್ತಿದ್ದರು. ಚಿಂತಾಮಣಿ ತಾಲ್ಲೂಕು ಮುನಗನಹಳ್ಳಿ ಗ್ರಾಮದ ವ್ಯಾಜ್ಯ ವಿಚಾರವಾಗಿ ತೆರಳುತ್ತಿರಬೇಕಾದರೆ ಈ ದುರಂತ ಸಂಭವಿಸಿದೆ.

ಇನ್ನು ರಾತ್ರಿ ಪಾಳಿಯಲ್ಲಿ ಬೈಕ್ ನಲ್ಲಿ ತೆರಳಿದ್ದೇ ಅವಘಡಕ್ಕೆ ಕಾರಣ ಎಂಬ ಆರೋಪವೂ ಕೇಳಿ ಬಂದಿದೆ. ಇಲಾಖೆ ಜೀಪ್ ವ್ಯವಸ್ಥೆ ಮಾಡದಿದ್ದಕ್ಕೆ ಸಹೋದ್ಯೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಪೊಲೀಸರಿಗೆ ರಕ್ಷಣೆಯೇ ಎಂದು ಕೆಳಹಂತದ ಅಧಿಕಾರಿಗಳು ತಮ್ಮ ನೋವು ತೋಡಿಕೊಂಡಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Accident ASI ಗ್ರಾಮಾಂತರ ರಕ್ಷಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ