ಗರ್ಭಿಣಿಯನ್ನು ಕೊಂದ ಚಿರತೆ

Leopard attacked on pregnant lady: ramanagar

18-01-2018

ರಾಮನಗರ: ಚಿರತೆ ದಾಳಿಯಿಂದ ಗರ್ಭಿಣಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆಯು, ರಾಮನಗರದಲ್ಲಿ ನಡೆದಿದೆ. ಸುಮಾ(25) ಮೃತ ಗರ್ಭಿಣಿ. ರಾಮನಗರದ ಚೌಕಾಸಂದ್ರ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಚೌಕಾಸಂದ್ರ ನಿವಾಸಿಯಾದ ಸುಮಾ ಅವರು, ಬೆಳಿಗ್ಗೆ ಬಯಲು ಬಹಿರ್ದೆಸೆಗೆ ಹೋಗಿದ್ದಾಗ ಚಿರತೆ ಏಕಾಏಕಿ ದಾಳಿ ಮಾಡಿದೆ. ಗರ್ಭಿಣಿಯಾಗಿದ್ದ ಸುಮಾ ತಪ್ಪಿಸಿಕೊಳ್ಳಲಾಗದೇ ಚಿರತೆ ದಾಳಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ.  ಚಿರತೆಯು ಸುಮಾ ಅವರ ಕುತ್ತಿಗೆ ಹಾಗು ಬಾಯಿಗೆ ಹಾನಿಗೊಳಿಸಿದ್ದು, ತೀವ್ರ ರಕ್ತಸ್ರಾವದಿಂದ ಗರ್ಭಿಣಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Leopard pregnant ಬಹಿರ್ದೆಸೆ ಗರ್ಭಿಣಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ