ಅಂಬುಲೆನ್ಸ್ ನಲ್ಲೇ ಅವಳಿ ಮಕ್ಕಳಿಗೆ ಜನ್ಮ

A women delivered Twins in ambulance

17-01-2018

ಬಳ್ಳಾರಿ: 108 ಅಂಬುಲೆನ್ಸ್ ನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಘಟನೆ ಬಳ್ಳಾರಿಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಆನೆಕಲ್ ತಾಂಡದ ಬಳಿ ಬೆಳಕಿಗೆ ಬಂದಿದೆ. ಮಂಜುಳ ಬಾಯಿ ಎಂಬ ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಂಜುಳ, ಹೆಚ್.ಬಿ.ಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆತರುವಾಗ, ದಾರಿ ಮಧ್ಯೆ‌ ಹೆರಿಗೆ ನೋವು ಹೆಚ್ಚಾಗಿದ್ದು, ಅಂಬುಲೆನ್ಸ್ ಇ.ಎಂ.ಟಿ.ಮಂಜುನಾಥ ಮತ್ತು ಚಾಲಕ ರಾಜಭಕ್ಷಿ ಸಮಯ ಪ್ರಜ್ಞೆಯಿಂದ, ದಾರಿಮಧ್ಯೆ ಹೆರಿಗೆ ಮಾಡಿಸಿ ಸಾಹಸ ಮೆರೆದಿದ್ದಾರೆ. ಬಾಣಂತಿಯ ಮಕ್ಕಳು ಕ್ಷೇಮವಾಗಿದ್ದು, ಹೆಚ್.ಬಿ.ಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಆರೈಕೆ ಮಾಡಲಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

ambulance delivery ಬಾಣಂತಿ ಪ್ರಜ್ಞೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ