ವೇಣುಗೋಪಾಲ್ ಮತ್ತು ಸಚಿವರ ದಿಢೀರ್ ಭೇಟಿ

Venugopal and ministers sudden meeting in guest house

17-01-2018

ಬೆಂಗಳೂರು: ಸಂಘಟನೆಯಲ್ಲಿ ತೊಡಗದ ಸಚಿವರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಇಂದು ಹಲ ಸಚಿವರು ಕುಮಾರಕೃಪಾ ಅತಿಥಿ ಗೃಹದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿರುವ ಕೆ.ಸಿ.ವೇಣುಗೋಪಾಲ್ ಜತೆ ಚರ್ಚೆ ನಡೆಸಿದರು.

ಸಚಿವರಾದ ರಮೇಶ್ ಕುಮಾರ್, ಹೆಚ್.ಆಂಜನೇಯ, ಪ್ರಿಯಾಂಕ್ ಖರ್ಗೆ ಮತ್ತಿತರರು ಇಂದು ವೇಣುಗೋಪಾಲ್ ಅವರನ್ನು ಭೇಟಿಯಾಗಿ ಕೆಲ ಹೊತ್ತು ಚರ್ಚಿಸಿದರು. ಸಚಿವರುಗಳು ಪಕ್ಷದ ಕಾರ್ಯಕ್ರಮದಲ್ಲಾಗಲಿ, ಸಭೆಗಳಿಗಾಗಲಿ ಬರುವುದಿಲ್ಲವೆಂದು ನಿನ್ನೆ ನಡೆದ ಸಭೆಯಲ್ಲಿ ಪರಮೇಶ್ವರ್ ಗರಂ ಆಗಿದ್ದರು. ಆಗ ಪರಮೇಶ್ವರ್ ಹೇಳಿಕೆಗೆ ಸಚಿವರ ವಿರುದ್ದ ಕ್ರಮ ಕೈಗೊಳ್ಳೋದಾಗಿ ವೇಣುಗೋಪಾಲ್ ತಿಳಿಸಿದ್ದರು.

ಇದೀಗ ದಿಢೀರ್ ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ ಸಚಿವರುಗಳು, ಇನ್ನು ಮುಂದೆ  ಪಕ್ಷದ ಕಾರ್ಯಕ್ರಮ, ಸಭೆಗಳಲ್ಲಿ ಭಾಗವಹಿಸಿ ಪಕ್ಷ ಸಂಘಟಿಸೋದಾಗಿ ಸಚಿವರು ತಿಳಿಸಿದ್ದಾರೆ ಎನ್ನಲಾಗಿದೆ. ಗೆಸ್ಟ್ ಹೌಸ್ ನಿಂದ ಹೊರ ಬಂದ ಆರೋಗ್ಯ ಸಚಿವ ರಮೇಶ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಸಾರ್ವಜನಿಕ ಬದುಕಿನಲ್ಲಿರುವ ಗೋವಾ ನೀರಾವರಿ ಸಚಿವರ ಈ ರೀತಿಯ ಹೇಳಿಕೆ ಸರಿಯಲ್ಲ. ಕನ್ನಡಿಗರನ್ನು ಹರಾಮಿ ಎಂದು ಬಳಸಿರುವುದು ತಪ್ಪು ಎಂದು ಹೇಳಿದರು. ಈ ಮಾತು ಗೋವಾ ಸಚಿವರಿಗೆ ಗೌರವ ತರಲ್ಲ.  ಜನ ನಮ್ಮನ್ನು ನೋಡಿ ಏನು ತಿಳಿದುಕೊಳ್ಳುತ್ತಾರೆ. ನಾಚಿಕೆಯಾಗುತ್ತದೆ ಎಂದ ಅವರು, ಮಹಾದಾಯಿ ವಿಚಾರವಾಗಿ ಸಿಎಂ, ಸರ್ಕಾರದ ತೀರ್ಮಾನಕ್ಕೆ ಬದ್ಧ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ