ಸಾರಿಗೆ ನೌಕರರ ಸಂಘದ ಪ್ರತಿಭಟನೆ ವಾಪಸ್

No protest from CITU tomorrow

17-01-2018

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನಾಳೆ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘ (ಸಿಐಟಿಯು) ದಿಂದ ಪ್ರತಿಭಟನೆ ಹಿನ್ನೆಲೆ. ಈ ಕುರಿತಂತೆ ವಿಕಾಸಸೌಧದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ಈಗಾಗಲೇ (ಸಿಐಟಿಯು) ಸಂಘಟನೆಯವರ ಜೊತೆ ಮಾತುಕತೆ ನಡೆಸಲಾಗಿದೆ. 1.30ಲಕ್ಷಕ್ಕೂ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಇಲಾಖೆ ಇದು. 6 ಬೇಡಿಕೆಗಳ ಬಗ್ಗೆ ಸಂಘಟನೆಯವರು ಇಲಾಖೆ ಮುಂದೆ ಬೇಡಿಕೆ ಇಟ್ಟಿದ್ದರು, ಇದರಲ್ಲಿ ಬಹುತೇಕ ಬೇಡಿಕೆ ಈಡೇರಿಸಿದ್ದೇವೆ. ಕೆಲವು ಬೇಡಿಕೆಗಳಿಗೆ ಮಾತ್ರ ಸಮಯ ಕೇಳಿದ್ದೇವೆ ಎಂದರು.

ಈಗಾಗಲೇ ಸರ್ಕಾರ 4 ರಸ್ತೆ ಸಾರಿಗೆ ನಿಗಮದ ನೌಕರರಿಗೆ ಶೇ 12.5% ವೇತನ ಹೆಚ್ಚಳ ಮಾಡಲಾಗಿದೆ. ನೌಕರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಲ್ಲಾ ಕ್ರಮ ತೆಗೆದುಕೊಂಡಿದ್ದೇವೆ. ಹೀಗಾಗಿ ಸಂಘಟನೆಯವರು ಪ್ರತಿಭಟನೆ ಮಾಡೋದು ಬೇಡ ಅಂತ ಮನವಿ ಮಾಡಿದ್ದೇವೆ. ಹೀಗಾಗಿ ನಾಳಿನ ಪ್ರತಿಭಟನೆಯನ್ನು ಸಂಘಟನೆಯವರು ವಾಪಸ್ ಪಡೆದಿದ್ದಾರೆ ಎಂದು, ಸಾರಿಗೆ ಸಚಿವ ಎಚ್.ಎಂ.ರೇವಣ್ಣ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

H.M Revanna transport ಸಾರಿಗೆ ನಿಗಮ ಸಂಘಟನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ