ರಮೇಶ್ ಕುಮಾರ್ ವಿರುದ್ಧ ಎಸಿಬಿಗೆ ದೂರು

RTI Activist lodge complaint against ramesh kumar in acb

17-01-2018

ಮಂಡ್ಯ: ಮಂಡ್ಯದ ಆರ್.ಟಿ.ಐ ಕಾರ್ಯಕರ್ತ ರವೀಂದ್ರ, ಆರೋಗ್ಯ ಸಚಿವ ರಮೇಶ್ ಕುಮಾರ್ ಸೇರಿದಂತೆ ಐವರ ವಿರುದ್ಧ ಎಸಿಬಿಗೆ ದೂರು ಸಲ್ಲಿಸಿದ್ದಾರೆ. ಮಂಡ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು, ರವೀಂದ್ರ ದೂರಿದ್ದಾರೆ. ಆರೋಗ್ಯ ಸಚಿವ ರಮೇಶ್ ಕುಮಾರ್, ಐಎಎಸ್ ಅಧಿಕಾರಿ ಶಾಲಿನಿ ರಜನೀಶ್, ಶಾಸಕ ಚಲುವರಾಯಸ್ವಾಮಿ, ಸರ್ಕಾರದ ಅಧೀನ ಕಾರ್ಯದರ್ಶಿ ನರಸಿಂಹರಾಜು, ಹಾಗೂ ಮಂಡ್ಯ ಡಿಹೆಚ್ಒ ಮೋಹನ್ ವಿರುದ್ಧ ಎಸಿಬಿಗೆ ದೂರು ನೀಡಿದ್ದಾರೆ.

ಆರೋಗ್ಯ ಸಚಿವ ರಮೇಶ್ ಕುಮಾರ್ ಸೇರಿ ಮೂವರು ಅಧಿಕಾರಿಗಳು ಮತ್ತು ನಾಗಮಂಗಲ ಶಾಸಕ ಸೇರಿ ಜೇಷ್ಠತಾಪಟ್ಟಿ ಬಿಟ್ಟು, ಡಾ.ಮೋಹನ್ ಗೆ ಡಿಹೆಚ್ಒ ಹುದ್ದೆಗೇರಲು ಸಹಕರಿಸಿದ ಆರೋಪ ಹಿನ್ನೆಲೆ ದೂರು ದಾಖಲಿಸಿದ್ದಾರೆ. ನಾಗಮಂಗಲ ಶಾಸಕ ಚಲುವರಾಯಸ್ವಾಮಿ ಆರೋಗ್ಯ ಮಂತ್ರಿಯಾಗಿದ್ದಾಗ ತಮ್ಮ ಅಣ್ಣನ ಮಗ ಮೋಹನ್ ಗೆ ಜೇಷ್ಠತೆ ಇಲ್ಲದಿದ್ರು ಏಕಾಏಕಿ ಪ್ರಮೋಶನ್ ಕೊಟ್ಟು ಅಧಿಕಾರ ದುರ್ಬಳಕೆ ಮಾಡಿದ್ದಾರೆಂದು ಆರ್.ಟಿ.ಐ ಕಾರ್ಯಕರ್ತ ರವೀಂದ್ರ  ಆರೋಪಿಸಿದ್ದಾರೆ.

ಡಾ.ಮೋಹನ್ರನ್ನು ಮಂಡ್ಯ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಯನ್ನಾಗಿ ಮತ್ತು ಜಿಲ್ಲಾ ವೈದ್ಯಾಧಿಕಾರಿಯಾಗಿ ಮಾಡಿ ಈ ನಾಲ್ವರು ಸಹಕರಿಸಿದ್ದಾರೆ, ಇದಲ್ಲದೆ ಡಿಹೆಚ್ ಡಾ.ಮೋಹನ್ ಮಂಡ್ಯದ ತಮ್ಮ ವಸತಿ ಗೃಹವನ್ನು ಬೇರೆಯವರಿಗೆ ಬಾಡಿಗೆ ಕೊಟ್ಟು ಮತ್ತು‌ ಮಾನ್ಯತೆ ಇಲ್ಲದೆ ಡಿಪಿಹೆಚ್ ಕೋರ್ಸ್ ಮಾಡಿ ಸಾತ್ನಕೋತ್ತರ ಭತ್ಯೆ ಪಡೆದಿರುವುದಾಗಿಯೂ, ಈ ಪ್ರಕರಣದಲ್ಲಿ ಅಕ್ರಮ ಭ್ರಷ್ಟಾಚಾರ ನಡೆಸಿದ ಐವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಜರುಗಿಸುವಂತೆ ಬೆಂಗಳೂರು ಎಸಿಬಿಗೆ ಆರ್.ಟಿ.ಐ ಕಾರ್ಯಕರ್ತ ರವೀಂದ್ರ ಪತ್ರದ ‌ಮೂಲಕ ದೂರು ಸಲ್ಲಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Ramesh kumar Health minister ಭ್ರಷ್ಟಾಚಾರ ನಿಯಂತ್ರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ